![](https://kannadadunia.com/wp-content/uploads/2023/06/Bandra_versova_sea_link-1024x679.jpg)
ಮಹಾರಾಷ್ಟ್ರ ಸರ್ಕಾರ ಮುಂಬೈನ ಎರಡು ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ವೀರ್ ಸಾವರ್ಕರ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಮರುನಾಮಕರಣ ಮಾಡಿದೆ.
ಸರ್ಕಾರವು ವರ್ಸೋವಾ -ಬಾಂದ್ರಾ ಸೀ ಲಿಂಕ್ ಗೆ ವೀರ್ ಸಾವರ್ಕರ್ ಸೇತು ಎಂದು ಮರುನಾಮಕರಣ ಮಾಡಿದರೆ, ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಗೆ ಅಟಲ್ ಬಿಹಾರಿ ವಾಜಪೇಯಿ ಸ್ಮೃತಿ ನ್ಹವಾ ಶೇವಾ ಅಟಲ್ ಸೇತು ಎಂದು ಮರುನಾಮಕರಣ ಮಾಡಿ ಆದೇಶಿಸಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸೇತುವೆಗಳಿಗೆ ಮರುನಾಮಕರಣ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಮೇ 28 ರಂದು ಜರುಗಿದ ವೀರ್ ಸಾವರ್ಕರ್ ಜಯಂತಿಯಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬಾಂದ್ರಾ-ವರ್ಸೋವಾ ಸೀ ಲಿಂಕ್‌ಗೆ ಸಾವರ್ಕರ್ ಅವರ ಹೆಸರನ್ನು ಇಡುವುದಾಗಿ ಘೋಷಿಸಿದ್ದರು. ಅದರಂತೆ ಇದೀಗ ಹೆಸರು ಮರುನಾಮಕರಣ ಮಾಡಿ ಅಧಿಕೃತಗೊಳಿಸಿದ್ದಾರೆ.
ನಿರ್ಮಾಣ ಹಂತದ ಬಾಂದ್ರಾ ವರ್ಸೋವಾ ಸೀ ಲಿಂಕ್ 17.17 ಕಿಮೀ ಉದ್ದವಿದೆ. ಮುಂಬೈ ಕರಾವಳಿ ರಸ್ತೆ ಯೋಜನೆಯ ಭಾಗವಾಗಿ ಅಂಧೇರಿಯ ವರ್ಸೋವಾ ಪ್ರದೇಶವನ್ನು ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕಕ್ಕೆ ಸಂಪರ್ಕಿಸುತ್ತದೆ. ಎಂಟು ಪಥಗಳ ಈ ಸೇತುವೆಯು ವೆಸ್ಟರ್ನ್ ಎಕ್ಸ್ ಪ್ರೆಸ್ ಹೆದ್ದಾರಿ ಮತ್ತು ಮುಂಬೈ ಉಪನಗರ ರೈಲ್ವೆಯ ಪಶ್ಚಿಮ ಮಾರ್ಗದ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.