ಪ್ರಯಾಣಿಕರ ವಿಚಿತ್ರ ವರ್ತನೆಗಳಿಂದ ದೆಹಲಿ ಮೆಟ್ರೋ ಇತ್ತೀಚಿಗೆ ಸಾಕಷ್ಟು ಸುದ್ದಿಯಾಗ್ತಿದೆ. ಈ ನಡುವೆ ಮೆಟ್ರೋ ರೈಲಿನಲ್ಲಿ ಯುವಕ ಮತ್ತು ಯುವತಿ ಪರಸ್ಪರ ಸಮೀಪ ನಿಂತು ಅನ್ಯೋನ್ಯವಾಗಿದ್ದರು. ಇದನ್ನು ಕಂಡ ಇಬ್ಬರು ಮಹಿಳೆಯರು ಅವರನ್ನು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದನ್ನ ವಿರೋಧಿಸಿದ ಆ ಯುವ ಜೋಡಿ ಮಹಿಳೆಯರೊಂದಿಗೆ ಜಗಳವಾಡಿರೋ ವಿಡಿಯೋ ವೈರಲ್ ಆಗಿದೆ.
ಪರಸ್ಪರ ಸಮೀಪ ನಿಂತಿದ್ದ ಯುವಕ ಮತ್ತು ಯುವತಿಯನ್ನು ವಿರೋಧಿಸಿ ಮಹಿಳೆಯರು ಪ್ರಶ್ನಿಸಿದ್ರೆ, ಅವರು ನಾವು ಯಾವುದೇ ದುರ್ವರ್ತನೆ ತೋರಿಲ್ಲ ಎಂದಿದ್ದಾರೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ಯುವಜೋಡಿಯನ್ನು ಈ ರೀತಿ ಗುರಿಯಾಗಿಸುವುದು ತಪ್ಪು ಎಂದಿದ್ದು ಮಹಿಳೆಯರ ನಡೆಯನ್ನ ಅನೇಕರು ಪ್ರಶ್ನಿಸಿದ್ದಾರೆ.