ಧಾರವಾಡ: ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಆಪರೇಷನ್ ಕಮಲವೇ ಕಾರಣ, ನಾವೇ ಕರ್ಕೊಂಡು ಬಂದಿದ್ರಿಂದ ಅನುಭವಿಸುತ್ತಿದ್ದೀವಿ ಎಂದು ವಲಸಿಗ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಸಚಿವ ಎಂ.ಬಿ. ಪಾಟೀಲ್ ಟಾಂಗ್ ನೀಡಿದ್ದು, ಇದಕ್ಕೆ ಬಿಜೆಪಿ ಸೇರಿರುವ ನಾಯಕರೇ ಉತ್ತರ ನೀಡಲಿ ಎಂದಿದ್ದಾರೆ.
ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಧಾರವಾಡದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿರುವ ಮುನಿರತ್ನ, ಸುಧಾಕರ್, ಎಂಟಿಬಿ, ಬಿ.ಸಿ. ಪಾಟೀಲ್, ಸೋಮಶೇಖರ್ ಸೇರಿದಂತೆ 17 ಶಾಸಕರು ಉತ್ತರ ನೀಡಲಿ ಎಂದರು.
ಇದೇ ವೇಳೆ ಆಪರೇಷನ್ ಕಮಲದಿಂದ ಬಿಜೆಪಿಗೆ ಸೇರಿದ್ದ ನಾಯಕರನ್ನು ಮತ್ತೆ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಳ್ಳುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರನ್ನು ಮರಳಿ ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ಮಾತೇ ಇಲ್ಲ ಎಂದು ಹೇಳಿದರು.