ಬ್ರಹ್ಮಚಾರಿಗಳಿಗೆ ಮನೆ ಕೋಡೋದಿಲ್ಲ, ಮಾಂಸಹಾರಿಗಳಿಗೆ ಮನೆ ಕೊಡೋದಿಲ್ಲ ಎಂಬ ವಿಷಯಗಳ ನಡುವೆ ಮತ್ತೊಂದು ವಿಚಾರ ಹೊರಬಿದ್ದಿದೆ. ಕೇರಳ ಮೂಲದ ಮಲಯಾಳಿಗಳಿಗೆ ಮನೆ ಕೊಡುವುದಿಲ್ಲ ಎಂದು ಮನೆ ಮಾಲೀಕರು ಹೇಳಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಮನೆ ಮಾಲೀಕರು ಮತ್ತು ಬಾಡಿಗೆಗೆ ಮನೆಯನ್ನು ಹುಡುಕುತ್ತಿರುವ ವ್ಯಕ್ತಿಯ ನಡುವಿನ ವಾಟ್ಸಾಪ್ ಆಧಾರಿತ ಚಾಟ್ ನ ಸ್ಕ್ರೀನ್‌ಶಾಟ್ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಬಾಡಿಗೆ ಮನೆಗೆ ಬರುವವರು ಕೇರಳ ಮೂಲದವನಾಗಿದ್ದು ಮಲಯಾಳಿ ಎಂದು ತಿಳಿದ ನಂತರ ಬಾಡಿಗೆ ನೀಡಲು ಮಾಲೀಕರು ನಿರಾಕರಿಸಿದ್ದಾರೆ ಎಂಬ ಕಾರಣಕ್ಕೆ ಇದು ವೈರಲ್ ಆಗಿದೆ.
ಈ ವಿಷಯವು ಜನಪ್ರಿಯ ಮಲಯಾಳಂ ಬರಹಗಾರ ಎನ್‌ಎಸ್ ಮಾಧವನ್ ಅವರ ಗಮನವನ್ನು ಸೆಳೆದಿದ್ದು ಅವರು ಟ್ವಿಟರ್‌ನಲ್ಲಿ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ.
ಕೆಲವರು ಇದು ಬೆಂಗಳೂರಿನ ಪ್ರಕರಣ ಎಂದು ಹೇಳಿದರೆ, ಕೆಲವರು ದ್ವೇಷವನ್ನು ಹರಡಲು ಇದು ಕಟ್ಟುಕಥೆ ಎಂದು ಟೀಕಿಸಿದ್ದಾರೆ. ಐಐಎಂ ಬೆಂಗಳೂರಿನ ಟ್ವಿಟ್ಟರ್ ಬಳಕೆದಾರರೊಬ್ಬರು, “ಕಪೋಲಕಲ್ಪಿತ ವಾಟ್ಸಾಪ್ ಚಾಟ್‌ಗಳನ್ನು ವಿಲೇವಾರಿ ಮಾಡುವುದನ್ನು ನಿಲ್ಲಿಸಿ” ಎಂದು ಹೇಳಿದ್ದಾರೆ.
ಕೇರಳ ಮೂಲದ ಕೆಲವರು ಬೀಫ್ ತಿನ್ನುತ್ತಾರೆಂದು ನಂಬಲಾಗಿದೆ. ಹಾಗಾಗಿ ಅಂಥವರಿಗೆ ಮನೆ ನೀಡುವುದಿಲ್ಲ ಎಂದು ಮಾಲೀಕರು ಹೇಳಿರಬಹುದೆಂದು ಚರ್ಚಿಸಲಾಗ್ತಿದೆ.
For sanghis Malayalis are the New Muslims 🤷♀️ pic.twitter.com/4gP49MU592
— N.S. Madhavan (@NSMlive) June 22, 2023