alex Certify Shocking | ಸಾಕುನಾಯಿಗಳನ್ನು ಮನೆಯಲ್ಲಿ ಕೂಡಿಹಾಕಿ 6 ತಿಂಗಳು ಕೆನಡಾ ಪ್ರವಾಸಕ್ಕೆ ತೆರಳಿದ ವೈದ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking | ಸಾಕುನಾಯಿಗಳನ್ನು ಮನೆಯಲ್ಲಿ ಕೂಡಿಹಾಕಿ 6 ತಿಂಗಳು ಕೆನಡಾ ಪ್ರವಾಸಕ್ಕೆ ತೆರಳಿದ ವೈದ್ಯ

ಪಂಜಾಬ್‌ನ ಅಮೃತಸರದಲ್ಲಿ ವರದಿಯಾದ ಆಘಾತಕಾರಿ ಘಟನೆಯೊಂದರಲ್ಲಿ ವೈದ್ಯರೊಬ್ಬರು ಕೆನಡಾ ಪ್ರವಾಸಕ್ಕೆ ಹೋಗಿದ್ದ ಸಮಯದಲ್ಲಿ ತಮ್ಮ ನಾಯಿಗಳನ್ನ 6 ತಿಂಗಳ ಕಾಲ ಗಮನಿಸದೇ ಹಾಗೇ ಬಿಟ್ಟಿದ್ದಾರೆಂಬ ಆರೋಪ ಕೇಳಿಬಂದಿದೆ. ವಿದೇಶ ಪ್ರವಾಸ ವೇಳೆ ಮನೆಯ ಪಾರ್ಕಿಂಗ್ ಜಾಗದಲ್ಲಿ ಸಾಕಿದ್ದ ತಮ್ಮ ಎರಡು ನಾಯಿಗಳನ್ನು ಕರುಣೆಯಿಲ್ಲದೆ ಆರು ತಿಂಗಳ ಕಾಲ ಸಾಯಲು ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

ಬಿಸಿಲಿನ ತಾಪ, ಗಾಳಿ ಇಲ್ಲದಿರುವುದು ಮತ್ತು ಆಹಾರದ ಕೊರತೆಯ ನಡುವೆ ಒಂದು ನಾಯಿ ಮೂರ್ಛೆ ಹೋದರೆ ಇನ್ನೊಂದು ಹುಳುಗಳಿಂದ ಸೋಂಕಿಗೆ ಒಳಗಾಗಿದೆ. ಈಗ ವೈದ್ಯರ ವಿರುದ್ದ ಎಫ್‌ಐಆರ್‌ ದಾಖಲಿಸಲಾಗಿದೆ.

ಅಮೃತಸರ ಮೂಲದ ವೈದ್ಯಕೀಯ ತಜ್ಞರನ್ನು ಪಿಎಸ್ ಬೇಡಿ ಎಂದು ಗುರುತಿಸಲಾಗಿದ್ದು, ಅವರು ರಂಜಿತ್ ಅವೆನ್ಯೂದ ಬ್ಲಾಕ್ ಎ ನಿವಾಸಿಯಾಗಿದ್ದಾರೆ. ವರದಿಗಳ ಪ್ರಕಾರ ನಾಯಿಗಳನ್ನು ನೋಡಿಕೊಳ್ಳಲು ಮತ್ತು ಆಹಾರ ನೀಡುವಂತೆ ಪಿಎಸ್ ಬೇಡಿ ಮನೆಯ ಕೀಗಳನ್ನು ತನ್ನ ಸಹೋದರನಿಗೆ ನೀಡಿದ್ದರು. ಆದರೆ ನಾಯಿಗಳಿಗೆ ಅವರು ಯಾವುದೇ ಆಹಾರವನ್ನು ನೀಡಿರಲಿಲ್ಲ.

ಪ್ರಾಣಿ ಕಲ್ಯಾಣ ಮತ್ತು ಆರೈಕೆ ಸೇವಾ ಪ್ರತಿಷ್ಠಾನ (ಎಡಬ್ಲ್ಯುಸಿಎಸ್‌ಎಫ್) ಮಧ್ಯಪ್ರವೇಶಿಸಿದಾಗ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ನಾಯಿಗಳ ರಕ್ಷಣೆ ಮಾಡಿ ಅವುಗಳಿಗೆ ಚಿಕಿತ್ಸೆಗೆ ಕೊಡಿಸಿ ಎಂದು ಕೇಳಿಕೊಂಡರೆ ಅದಕ್ಕೆ ವೈದ್ಯರ ಸೋದರ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ AWCSF ಪೊಲೀಸರನ್ನ ಸಂಪರ್ಕಿಸಿ ದೂರಿದೆ. ಪೊಲೀಸರು 1960 ರ ಪ್ರಾಣಿ ಹಿಂಸೆ ತಡೆ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಎರಡು ನಾಯಿಗಳನ್ನೂ ರಕ್ಷಿಸಲಾಗಿದೆ.

ಕುಟುಂಬದ ಸದಸ್ಯರಂತೆ ನೀವು ಅವರಿಗೆ ಪ್ರೀತಿ ಮತ್ತು ಗೌರವವನ್ನು ನೀಡಲು ಸಾಧ್ಯವಾಗದಿದ್ದರೆ ಸಾಕುಪ್ರಾಣಿಗಳನ್ನು ಮನೆಗೆ ತರಬೇಡಿ. ಅವು ಭಾವನೆಗಳನ್ನು ಹೊಂದಿರುವ ಜೀವಿಗಳು. ಅವು ಆಟಿಕೆಗಳಾಗಲೀ , ಯಂತ್ರಗಳಾಗಲೀ ಅಲ್ಲ ಎಂದು ಪ್ರಾಣಿಪ್ರಿಯರು ಈ ಘಟನೆ ವಿರೋಧಿಸಿ ದನಿಗೂಡಿಸಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...