HomeBusinessಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಮದ್ಯಪ್ರಿಯರಿಗೆ ಮತ್ತೊಂದು ಶಾಕ್

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಮದ್ಯಪ್ರಿಯರಿಗೆ ಮತ್ತೊಂದು ಶಾಕ್

ಬೆಂಗಳೂರು: ಮದ್ಯದ ಬಾಟಲಿಗಳ ಮುಚ್ಚಳದ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿಯ(EAL) ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲಾಗಿದೆ.

ಮದ್ಯದ ಭದ್ರತಾ ಚೀಟಿ ವೆಚ್ಚವನ್ನು ಮದ್ಯ ತಯಾರಕರ ಬದಲಿಗೆ ಗ್ರಾಹಕರಿಗೆ ವರ್ಗಾಯಿಸಿ ಅಬಕಾರಿ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಇದರಿಂದ ಗ್ರಾಹಕರು ಪ್ರತಿ ಬಾಟಲಿ ಮದ್ಯಕ್ಕೆ 31.74 ಪೈಸೆ ಹೆಚ್ಚುವರಿ ದರ ಪಾವತಿಸಬೇಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ಮದ್ಯದ ಬಾಟಲಿಗಳ ಮುಚ್ಚಳದ ಮೇಲೆ ಅಂಟಿಸುವ ಅಬಕಾರಿ ಭದ್ರತಾ ಚೀಟಿಯ ವೆಚ್ಚವು ಸೇರಿ ಮದ್ಯದ ಬಾಟಲಿಯ ಗರಿಷ್ಠ ಮಾರಾಟ ದರ(MRP) ನಿಗದಿಪಡಿಸಲಾಗುತ್ತಿತ್ತು. ಮದ್ಯ ತಯಾರಕರು ವೆಚ್ಚ ಭರಿಸಬೇಕಿತ್ತು. ಕರ್ನಾಟಕ ಮದ್ಯ ತಯಾರಕರ ಸಂಘದ ಮನವಿಯ ಮೇರೆಗೆ ಮೇ 22 ರಂದು ಅಬಕಾರಿ ಇಲಾಖೆ ಆಯುಕ್ತರು ಆದೇಶ ಹೊರಡಿಸಿ ಮದ್ಯದ ಬಾಟಲಿಯ ಮೇಲಿನ ಮುದ್ರಿತ ದರದಿಂದ ಅಬಕಾರಿ ಭದ್ರತಾ ಚೀಟಿ ವೆಚ್ಚವನ್ನು ಹೊರಗೆ ಇರಿಸಿದ್ದಾರೆ.

ವೈನ್ ಮತ್ತು ಮದ್ಯ ಉತ್ಪನ್ನಗಳ ಗರಿಷ್ಠ ಮಾರಾಟಗಾರ ಎಂಆರ್‌ಪಿ ಲೆಕ್ಕ ಹಾಕುವಾಗ ಅಬಕಾರಿ ಭದ್ರತಾ ಚೀಟಿಗಳ ಚೀಟಿಗಳ ವೆಚ್ಚವನ್ನು ಘೋಷಿತ ಬೆಲೆಯಲ್ಲಿ ತೋರಿಸದೇ ಪ್ರತ್ಯೇಕವಾಗಿ ತೋರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಅಬಕಾರಿ ಭದ್ರತಾ ಚೀಟಿಗಳ ಮುದ್ರಣ ದರವನ್ನು 31.74 ಪೈಸೆಗೆ ಹೆಚ್ಚಳ ಮಾಡಲಾಗಿದ್ದು, ಗ್ರಾಹಕರು ಪ್ರತಿ ಬಾಟಲಿ ಮದ್ಯ ಖರೀದಿಸುವಾಗ 31.10 ಪೈಸೆ ನೀಡಬೇಕಿದೆ. ಇದರಿಂದ ಗ್ರಾಹಕರಿಗೆ ವರ್ಷಕ್ಕೆ ಸುಮಾರು ಒಂದು ಸಾವಿರ ಕೋಟಿ ಹೊರೆಯಾಗುತ್ತದೆ ಎಂದು ಹೇಳಲಾಗಿದೆ. ಈ ಮೊತ್ತವನ್ನು ಮದ್ಯ ತಯಾರಿಕರೇ ಭರಿಸುತ್ತಿದ್ದರು. ಇನ್ನು ಮುಂದೆ ಗ್ರಾಹಕರು ಭರಿಸಬೇಕಿದೆ. ಇದರಿಂದ ಮದ್ಯ ತಯಾರಕರಿಗೆ ವಾರ್ಷಿಕ ಒಂದು ಸಾವಿರ ಕೋಟಿ ರೂಪಾಯಿ ಉಳಿತಾಯವಾಗುತ್ತದೆ. ಎಲ್ಲಾ ಅಳತೆಯ ಮದ್ಯದ ಬಾಟಲಿಗಳಿಗೆ ಭದ್ರತಾ ಚೀಟಿ ಅಂಟಿಸಲಾಗುವುದು. ಮದ್ಯದ ಪೆಟ್ಟಿಗೆಗೂ ಎರಡು ಚೀಟಿ ಆಂಟಿಸಲಿದ್ದು, ಈ ವೆಚ್ಚ ಗ್ರಾಹಕರ ಮೇಲೆ ಬೀಳಲಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular