alex Certify ಅಮೆರಿಕ ಅಧ್ಯಕ್ಷರೊಂದಿಗೆ ಮೋದಿ ಔತಣಕೂಟ, ಪ್ರಧಾನಿ ಕೈಯಲ್ಲಿ ಗಮನ ಸೆಳೆದ ಪಾನೀಯ ಯಾವುದು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ಅಧ್ಯಕ್ಷರೊಂದಿಗೆ ಮೋದಿ ಔತಣಕೂಟ, ಪ್ರಧಾನಿ ಕೈಯಲ್ಲಿ ಗಮನ ಸೆಳೆದ ಪಾನೀಯ ಯಾವುದು ಗೊತ್ತಾ ?

Viral Video: "Good News, We Both Don't Drink": Biden-Modi Bonhomie At State  Dinner

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆಂದೇ ಅಲ್ಲಿನ ಅಧ್ಯಕ್ಷ ಜೋ ಬೈಡೆನ್‌ ವಿಶೇಷ ಭೋಜನದ ವ್ಯವಸ್ಥೆ ಮಾಡಿದ್ದರು. ಈ ಭೋಜನ ಕೂಟ ಇಬ್ಬರು ಪ್ರಬಲ ನಾಯಕರ ಸ್ನೇಹಕ್ಕೆ ಸಾಕ್ಷಿಯಾಗಿದೆ. ಮೋದಿ ಹಾಗೂ ಬೈಡನ್‌ ಕೈಯಲ್ಲಿ ಪಾನೀಯಗಳನ್ನು ಹಿಡಿದು ಪರಸ್ಪರ ಚಿಯರ್ಸ್‌ ಮಾಡಿಕೊಳ್ತಿರೋ ಫೋಟೋ ಸಹ ವೈರಲ್‌ ಆಗಿದೆ.

ಅರೇ ಪ್ರಧಾನಿ ಮೋದಿ ಅಲ್ಕೋಹಾಲ್‌ ಸೇವನೆ ಮಾಡುವುದಿಲ್ಲ, ಹಾಗಿದ್ಮೇಲೆ ಇದ್ಯಾವ ಪಾನೀಯ ಅನ್ನೋ ಪ್ರಶ್ನೆ ಸಹಜ. ಇದು ಮದ್ಯವಲ್ಲ. ಪ್ರಧಾನಿ ಮೋದಿ, ಬೈಡನ್‌ ಅವರೊಂದಿಗೆ ಜಿಂಜರ್‌ ಏಲ್‌ ಎಂಬ ಪಾನೀಯವನ್ನು ಸವಿದಿದ್ದಾರೆ.

ಜಿಂಜರ್‌ ಏಲ್ ಎಂದರೇನು ?

ವಾಸ್ತವವಾಗಿ ಜಿಂಜರ್‌ ಏಲ್, ಕಾರ್ಬೊನೇಟೆಡ್ ತಂಪು ಪಾನೀಯವಾಗಿದೆ. ಅದರಲ್ಲಿ ಸೋಡಾವನ್ನು ಬೆರೆಸಲಾಗುತ್ತದೆ. ಇದು ಇತರ ತಂಪು ಪಾನೀಯಗಳಂತೆಯೇ ಇರುತ್ತದೆ. ಆದರೆ ಇದು ಶುಂಠಿಯ ಪರಿಮಳವನ್ನು ಹೊಂದಿದೆ. ಕೆಲವರು ಇದನ್ನು ಇತರ ಪಾನೀಯಗಳೊಂದಿಗೆ ಬೆರೆಸಿ ಕುಡಿಯುತ್ತಾರೆ, ಇನ್ನು  ಕೆಲವರು ನೇರವಾಗಿ ಕುಡಿಯುತ್ತಾರೆ. ಸೋಡಿಯಂ ಬೆಂಜೊನೇಟ್ ಮತ್ತು ಸಿಟ್ರಿಕ್ ಆಮ್ಲದಂತಹ ಸಂರಕ್ಷಕಗಳನ್ನು ಇದರಲ್ಲಿ ಬಳಸಲಾಗುತ್ತದೆ. ಕೆಲವರು ಚಡಪಡಿಕೆಯಿಂದ ಮುಕ್ತಿ ಪಡೆಯಲು ಇದನ್ನು ಕುಡಿಯುತ್ತಾರೆ.

ಅಧ್ಯಕ್ಷ ಜೋ ಬೈಡೆನ್ ಮತ್ತು ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅಮೆರಿಕಕ್ಕೆ ಬಂದಿಳಿದಿದ್ದರು. ಶ್ವೇತಭವನದಲ್ಲಿ ನಡೆದ ಭೋಜನಕೂಟದಲ್ಲಿ ಉದ್ಯಮಿ ಮುಖೇಶ್ ಅಂಬಾನಿ, ಗೂಗಲ್ ಸಿಇಒ ಸುಂದರ್ ಪಿಚೈ ಮತ್ತು ಆಪಲ್ ಸಿಇಒ ಟಿಮ್ ಕುಕ್ ಸೇರಿದಂತೆ ಅನೇಕ ದೊಡ್ಡ ಉದ್ಯಮಿಗಳು ಮತ್ತು ಬಿಲಿಯನೇರ್ ಕೈಗಾರಿಕೋದ್ಯಮಿಗಳಿಗೂ ಆಹ್ವಾನವಿತ್ತು.

ಪ್ರಧಾನಿ ಮೋದಿ ಅವರಿಗಾಗಿ ವಿಶೇಷ ತಿನಸುಗಳನ್ನು ಸಿದ್ಧಪಡಿಸಲಾಗಿತ್ತು. ಮ್ಯಾರಿನೇಟೆಡ್‌ ರಾಗಿ, ಕಾರ್ನ್ ಸಲಾಡ್, ಸ್ಟಫ್ಡ್ ಮಶ್ರೂಮ್‌, ಏಲಕ್ಕಿ ಬೆರೆಸಿದ ಸ್ಟ್ರಾಬೆರಿ ಶಾರ್ಟ್‌ಕೇಕ್‌ನಂತಹ ಭಕ್ಷ್ಯಗಳು ಬಾಯಲ್ಲಿ ನೀರೂರಿಸುತ್ತಿದ್ದವು. ಪ್ರಧಾನಿ ಮೋದಿಯವರ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಔತಣಕೂಟದ ಮೆನುವನ್ನು ಸಿದ್ಧಪಡಿಸಲಾಗಿತ್ತು.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...