HomeKarnatakaBIG NEWS: ನಿಮ್ಮ ಮನೆಮುರುಕತನಕ್ಕೆ ಜನ ಪಾಠ ಕಲಿಸಿದ್ರೂ ನಿಮಗೆ ಬುದ್ಧಿ ಬಂದಿಲ್ಲ; ನಳೀನ್ ಕುಮಾರ್...

BIG NEWS: ನಿಮ್ಮ ಮನೆಮುರುಕತನಕ್ಕೆ ಜನ ಪಾಠ ಕಲಿಸಿದ್ರೂ ನಿಮಗೆ ಬುದ್ಧಿ ಬಂದಿಲ್ಲ; ನಳೀನ್ ಕುಮಾರ್ ಕಟೀಲ್ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ

ಬೆಂಗಳೂರು: ಕಟೀಲ್ ಅವರೇ ನೀವು ಮನೆಗೆ ಮಾರಿ, ಪರರಿಗೆ ಉಪಕಾರಿ. ನಿಮ್ಮ ಮನೆ ಮುರುಕತನಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ ಆದರೂ ನಿಮಗೆ ಬುದ್ಧಿ ಬಂದಿಲ್ಲ ಎಂದು ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರ ಎಲ್ಲವನ್ನೂ ಕರ್ನಾಟಕಕ್ಕೆ ಕೊಡಲಿ ಎಂಬ ಸ್ವಾರ್ಥ ನಮ್ಮಲ್ಲಿ ಇಲ್ಲ. ಗೋದಾಮಿನಲ್ಲಿ ಅಕ್ಕಿಯನ್ನು ಕೊಳೆಸುವ ಬದಲು ಬಡವರಿಗೆ ಕೊಡಿ ಎಂದಿದ್ದೇವೆ. ಅದೂ ಮಾರುಕಟ್ಟೆ ದರದಲ್ಲಿ ಅದೂ ತಪ್ಪೇ? ಎಂದು ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೇಂದ್ರದ ನಿಮ್ಮ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ ಒಂದೇ ಎರಡೇ? ಜಿಎಸ್ ಟಿ ಬಾಕಿಯಲ್ಲಿ ಮೋಸ, ಜಿ ಎಸ್ ಟಿ ಪರಿಹಾರದಲ್ಲಿ ಮೋಸ, ನೆರೆ ಪರಿಹಾರದಲ್ಲಿ ಮೋಸ, ಬರ ಪರಿಹಾರದಲ್ಲೂ ಮೋಸ, ಯೋಜನೆ ಅನುಷ್ಠಾನದಲ್ಲೂ ಮೋಸ. ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಮಾಡಿರುವ ಮೋಸದ ಪಟ್ಟಿ ಹೇಳುತ್ತಾ ಹೋದರೆ ಪುಸ್ತಕವೇ ಬರೆಯಬಹುದು ಎಂದು ಗುಡುಗಿದ್ದಾರೆ.

ಕಟೀಲ್ ಅವರೆ ನೀವು ಈ ರಾಜ್ಯದ ಮನೆ ಮಗನಾಗಿ ಬಡವರ ಹೊಟ್ಟೆ ತುಂಬಿಸುವ ಅನ್ನಭಾಗ್ಯ ಯೋಜನೆಗೆ ಹೆಗಲು ಕೊಡಬೇಕು. ರಾಜ್ಯದ ಬಡವರಿಗೆ ಅಕ್ಕಿ ಕೊಡದೇ ದ್ವೇಷದ ರಾಜಕೀಯ ಮಾಡುತ್ತಿರುವುದು ಸರಿಯಲ್ಲ ಎಂದು ಕೇಂದ್ರ ನಾಯಕರಿಗೆ ತಿಳಿಹೇಳಬೇಕು. ಅದು ಬಿಟ್ಟು ಮೋದಿಯವರ ದ್ವೇಷದ ಬೆಂಕಿಗೆ ನೀವೆ ತುಪ್ಪ ಸುರಿದರೆ ಬಡವರ ಶಾಪ ನಿಮಗೆ ತಟ್ಟದಿರುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular