HomeKarnatakaBIG NEWS: ಕೊನೆಗೂ ಆಹಾರ ಸಚಿವ ಮುನಿಯಪ್ಪ ಭೇಟಿಗೆ ಅವಕಾಶ ನೀಡಿದ ಕೇಂದ್ರ ಸಚಿವ ಗೋಯಲ್

BIG NEWS: ಕೊನೆಗೂ ಆಹಾರ ಸಚಿವ ಮುನಿಯಪ್ಪ ಭೇಟಿಗೆ ಅವಕಾಶ ನೀಡಿದ ಕೇಂದ್ರ ಸಚಿವ ಗೋಯಲ್

ನವದೆಹಲಿ: ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ವಿತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಕೇಂದ್ರ ಸಚಿವ ಪಿಯೂಷ್ ಗೋಯಲ್ ಕೊನೆಗೂ ರಾಜ್ಯ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಭೇಟಿಗೆ ಅವಕಾಶ ನೀಡಿದ್ದಾರೆ.

ಕಳೆದ ಮೂರು ದಿನಗಳಿಂದ ಕೇಂದ್ರ ಸಚಿವ ಗೋಯಲ್ ಭೇಟಿಗೆ ಸಮಯಾವಕಾಶ ಸಿಗದೇ ಸಚಿವ ಮುನಿಯಪ್ಪ ಕಾಯುತ್ತಿದ್ದರು. ಸಚಿವರ ಭೇಟಿಗೆ ಅವಕಾಶ ಸಿಕ್ಕ ಹಿನ್ನೆಲೆಯಲ್ಲಿ ಸಚಿವ ಮುನಿಯಪ್ಪ ಇಂದು ಬೆಳಿಗ್ಗೆ ದೆಹಲಿಗೆ ಪ್ರಯಾಣಿಸಿದ್ದು, ಬೆಳಿಗ್ಗೆ 10:30ಕ್ಕೆ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯಕ್ಕೆ ಹೆಚ್ಚುವರಿ ಅಕ್ಕಿ ಪೂರೈಸುವಂತೆ ಈ ವೇಳೆ ಸಚಿವರು ಮನವಿ ಮಾಡಲಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular