HomeAutoಬೈಕ್ ಬೆಲೆ 85 ಸಾವಿರವಾದ್ರೆ ಪಾವತಿಸಬೇಕಿರುವ ದಂಡ 70 ಸಾವಿರ ರೂಪಾಯಿ....!

ಬೈಕ್ ಬೆಲೆ 85 ಸಾವಿರವಾದ್ರೆ ಪಾವತಿಸಬೇಕಿರುವ ದಂಡ 70 ಸಾವಿರ ರೂಪಾಯಿ….!

ಆತನ ಬೈಕ್ ಬೆಲೆ 85 ಸಾವಿರ ರೂಪಾಯಿ. ಆದರೆ ಟ್ರಾಫಿಕ್ ನಿಯಮ ಉಲ್ಲಂಘಿಸಿರುವುದರಿಂದ ಆತ ಕಟ್ಟಬೇಕಾಗಿರುವ ದಂಡದ ಮೊತ್ತ ಬರೋಬ್ಬರಿ 70,500 ರೂಪಾಯಿ. ಅಚ್ಚರಿಯಾದರೂ ಇದು ಸತ್ಯ.

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಒಬ್ಬ ವ್ಯಕ್ತಿಗೆ ಒಂದೂವರೆ ವರ್ಷಗಳ ಅವಧಿಯಲ್ಲಿ ಎಪ್ಪತ್ತು ಬಾರಿ ಟ್ರಾಫಿಕ್ ನಿಯಮ ಉಲ್ಲಂಘನೆ ಚಲನ್ ನೀಡಲಾಗಿದೆ. 85,000 ಮೌಲ್ಯದ ಆತನ ವಾಹನವು ಇಲ್ಲಿಯವರೆಗೆ ಒಟ್ಟು 70,500 ರೂಪಾಯಿ ದಂಡದ ಚಲನ್ ಪಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವ್ಯಕ್ತಿ ಈಗಾಗಲೇ ಈ ವರ್ಷ 33 ಚಲನ್‌ಗಳನ್ನು ಸ್ವೀಕರಿಸಿದ್ದಾರೆ ಮತ್ತು ಕಳೆದ ವರ್ಷ 37 ಟಿಕೆಟ್‌ಗಳನ್ನು ಪಡೆದಿದ್ದಾರೆ. ನಗರದಲ್ಲಿ ಅತಿ ಹೆಚ್ಚು ಚಲನ್ ನೀಡಿರುವ ಹತ್ತು ವಾಹನಗಳ ಪಟ್ಟಿಯನ್ನು ಸಂಚಾರ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಹೆಚ್ಚುವರಿಯಾಗಿ ಒಂಬತ್ತು ಮಂದಿಯನ್ನು ಡೀಫಾಲ್ಟರ್‌ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ, ಅವರಲ್ಲಿ ಕೆಲವರಿಗೆ 50 ಕ್ಕೂ ಹೆಚ್ಚು ಬಾರಿ ಚಲನ್ ಮಾಡಲಾಗಿದೆ.

ಗೋರಖ್‌ಪುರ ಪೊಲೀಸ್ ಆಡಳಿತವು ಭದ್ರತಾ ಉದ್ದೇಶಗಳಿಗಾಗಿ ಟ್ರಾಫಿಕ್ ಕ್ಯಾಮೆರಾಗಳನ್ನು ಅಳವಡಿಸಿದೆ. ಈ ಕ್ಯಾಮೆರಾಗಳು ಟ್ರಾಫಿಕ್ ಸಿಗ್ನಲ್ ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ನಂಬರ್ ಪ್ಲೇಟ್‌ಗಳನ್ನು ಸೆರೆಹಿಡಿಯುತ್ತವೆ. ಇದರಿಂದಾಗಿ ಸ್ವಯಂಚಾಲಿತ ಚಲನ್ ಉತ್ಪಾದನೆಯಾಗುತ್ತದೆ.

ನಿಯಮ ಉಲ್ಲಂಘಿಸಿದ ವ್ಯಕ್ತಿಗಳಿಗೆ ನೋಟಿಸ್ ಕಳುಹಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇಲ್ಲದಿದ್ದರೆ ಅವರ ವಾಹನಗಳನ್ನು ವಶಪಡಿಸಿಕೊಂಡು ದಂಡ ಪಾವತಿಸಿದ ನಂತರವೇ ಬಿಡುಗಡೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular