ವಾಷಿಂಗ್ಟನ್: ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ದಂಪತಿಗೆ ವಿಶೇಷವಾದ ಉಡುಗೊರೆಗಳನ್ನು ನೀಡಿದ್ದು, ವಿಶ್ವದ ಗಮನ ಸೆಳೆದಿದೆ.
ಬೈಡನ್ ದಂಪತಿಗೆ ವಾಷಿಂಗ್ಟನ್ ಡಿಸಿಯ ವೈಟ್ ಹೌಸ್ ನಲ್ಲಿ ಪ್ರಧಾನಿ ಮೋದಿ ಉಡುಗೊರೆ ರೀತಿ ದಶ ದಾನಗಳನ್ನು ನೀಡಿದ್ದಾರೆ. ಅಲ್ಲದೇ ಅದರ ವಿಶೇಷತೆಗಳನ್ನು ಪ್ರಧಾನಿ ಮೋದಿ ಬೈಡನ್ ದಂಪತಿಗೆ ವಿವರಿಸಿದ್ದಾರೆ.
ಮೈಸೂರಿನ ಶ್ರೀಗಂಧದಿಂದ ತಯಾರಿಸಲಾದ ಉಡುಗೊರೆ ಬಾಕ್ಸ್ ನಲ್ಲಿ ಬೆಳ್ಳಿಯ ಗಣೇಶನ ವಿಗ್ರಹ, ದೀಪ ಹಾಗೂ ಅದರ ಜೊತೆ 10 ಚಿಕ್ಕ ಚಿಕ್ಕ ಬಾಕ್ಸ್ ಗಳಿವೆ. ಅದರಲ್ಲಿ ಭೂ ದಾನ, ತಿಲ, ಚಿನ್ನ, ತುಪ್ಪ, ವಸ್ತ್ರ, ಧಾನ್ಯ, ಬೆಲ್ಲ, ಬೆಳ್ಳಿ, ಲವಣ, ಗೋವಿನ ಮೂರ್ತಿ ಸೇರಿ ದಶ ದಾನ ನೀಡಿದ್ದಾರೆ.
ಭಾರತೀಯ ಸಂಸ್ಕೃತಿ ಬಿಂಬಿಸುವ 10 ವಸ್ತುಗಳನ್ನು ಉಡುಗೊರೆಯಾಗಿ ಪ್ರಧಾನಿ ಮೋದಿ ನೀಡಿದ್ದಾರೆ.