ಬಹುನಿರೀಕ್ಷಿತ ಮಾರುತಿ ಸುಜ಼ುಕಿ ಜಿಮ್ನಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ದೇಶದ ಆಟೋಮೊಬೈಲ್ ವಿಭಾಗದಲ್ಲೇ ಇದೊಂದು ಭಾರೀ ಕಾಯುವಿಕೆ ಆಗಿತ್ತು.
ಮೂರು ಬಾಗಿಲುಗಳ ಅವತರಣಿಕೆ ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾದಾಗಿನಿಂದಲೂ ಈ ಕಾರಿಗಾಗಿ ಬಹಳ ಜನರು ಕಾಯುತ್ತಿದ್ದಾರೆ. ಆದರೆ ಭಾರತದಲ್ಲಿ ಜಿಮ್ನಿಯ ಐದು ಬಾಗಿಲುಗಳ ಅವತರಣಿಕೆಯನ್ನು ಮಾತ್ರವೇ ಬಿಡುಗಡೆ ಮಾಡಲು ಮಾರುತಿ ಸುಜ಼ುಕಿ ನಿರ್ಧರಿಸಿದೆ.
5 ಬಾಗಿಲಿನ ಜಿಮ್ನಿಯ ಡಕಾರ್ ರೇಸಿಂಗ್ ಅವತಾರವನ್ನು ಬಿಂಬಲ್ ಡಿಸೈನ್ಸ್ ಎಂಬ ಕಾರು ಕಸ್ಟಮೈಸೇಶನ್ ಗ್ಯಾರೇಜ್ ಒಂದು ಮಾಡಿದೆ. ಎಸ್ಯುವಿಯ ಸಸ್ಪೆಂಶನ್ ಅನ್ನು ಏರಿಸಲಾಗಿದ್ದು, ಇದಕ್ಕೆ ಚಕ್ರಗಳನ್ನು ಅಳವಡಿಸಲಾಗಿದೆ.
ಜೊತೆಗೆ ಕಾರಿನ ಮೇಲ್ಛಾವಣಿಯಲ್ಲಿ ರ್ಯಾಕ್ ಅಳವಡಿಸಿದ್ದು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇಂಧನದ ಕ್ಯಾನ್ಗಳು ಹಾಗೂ ಲಗೇಜ್ ಇಡಬಹುದಾಗಿದೆ. ಜೊತೆಗೆ ಮುಂಭಾಗಕ್ಕೆ ಹೊಸದಾಗಿ ಬಂಪರ್ ಅನ್ನು ಸಹ ಅಳವಡಿಸಲಾಗಿದೆ. ಇಂಜಿನ್ ಅನ್ನು ಕೂಲಾಗಿಡಲೆಂದು ಕಾರಿನ ಹುಡ್ಗೆ ಗಾಳಿಯ ವೆಂಟ್ಗಳನ್ನು ಸಹ ಅಳವಡಿಸಲಾಗಿದೆ. ಹಿಂಬದಿ ಡಿಸ್ಕ್ ಬ್ರೇಕ್ಗಳ ಮೂಲಕ ಕಾರಿನ ಬ್ರೇಕಿಂಗ್ ಸಾಮರ್ಥ್ಯಕ್ಕೆ ಇನ್ನಷ್ಟು ಬಲ ನೀಡಲಾಗಿದೆ.
ಜಿಮ್ನಿಯ ಈ ಡಕಾರ್ ಅವತಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕಾರು ಪ್ರಿಯರಿಗೆ ಭಾರೀ ಲೈಕ್ ಆಗಿದೆ.