ಬೆಂಗಳೂರು: ಇಂದಿರಾ ಕ್ಯಾಂಟೀನ್ ಪುನರಾರಂಭ ಮಾಡಿರುವ ರಾಜ್ಯ ಸರ್ಕಾರ ಫುಡ್ ಮೆನುವಿನಲ್ಲಿ ಹೊಸ ಬದಲಾವಣೆ ಮಾಡಿದೆ. ಮೆನು ಬದಲಾವಣೆ ಜೊತೆಗೆ ಗುಣಮಟ್ಟದ ಶುಚಿ ಹಾಗೂ ರುಚಿಯಾದ ಊಟ ನೀಡಲು ನಿರ್ಧರಿಸಿದೆ.
ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಆಹಾರದಲ್ಲಿ ಬಿಬಿಎಂಪಿ ವಿಶೇಷ ಬದಲಾವಣೆ ಜೊತೆ ಹೊಸ ಆಹಾರ ಸೇರ್ಪಡೆ ಮಾಡಿದ್ದು ಗಮನ ಸೆಳೆಯುತ್ತಿದೆ. ಬೆಳಿಗ್ಗೆ ಉಪಹಾರದಲ್ಲಿ ಬ್ರೆಡ್ ಜಾಮ್, ಮಂಗಳೂರು ಬನ್ಸ್ ಮಧ್ಯಾಹ್ನದ ಊಟದಲ್ಲಿ ಪಾಯಸ, ಮುದ್ದೆ-ಸೊಪ್ಪಿನ ಸಾಂಬಾರ್ ಸೇರಿಸಲಾಗಿದೆ.
ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನದ ಊಟಕ್ಕೆ ಪಾಯಸ ಅಥವಾ ಒಂದು ಸಿಹಿ ತಿಂಡಿ ನೀಡಲಾಗುತ್ತದೆ. ಒಂದು ದಿನ ಬಿಟ್ಟು ಒಂದು ದಿನ ಮುದ್ದೆ ಊಟ. ಮುದ್ದೆ ಊಟ ಇಲ್ಲದ ದಿನ ಚಪಾತಿ-ಸಾಗು ನೀಡಲು ಯೋಜನೆ ಸಿದ್ಧಗೊಂಡಿದೆ.
ಇಂದಿರಾ ಕ್ಯಾಂಟಿನ್ ನೂತನ ಮೆನು ಹಾಗೂ ದರ:
ಇಡ್ಲಿ-3 ಚಟ್ನಿ/ಸಾಂಬಾರ್ – 5 ರೂ.
ಬ್ರೆಡ್ 2 ಜಾಮ್ – 5 ರೂ.
ಮಂಗಳೂರು ಬನ್ಸ್ 1 – 5 ರೂ.
ಟೀ ಅಥವಾ ಕಾಫಿ – 5 ರೂ.
ವೆಜ್ ಪುಲಾವ್ /ಟೊಮೆಟೋ ಬಾತ್ – 5 ರೂ.
ಖಾರಾ ಪೊಂಗಲ್, ಚಟ್ನಿ – 5 ರೂ.
ಬಿಸಿಬೇಳೆ ಬಾತ್ – 5 ರೂ.
ಅನ್ನ, ತರಕಾರಿ ಸಾಂಬಾರ್ – 10 ರೂ.
ರಾಗಿ ಮುದ್ದೆ 2, ಸೊಪ್ಪು ಸಾಂಬಾರ್ – 10 ರೂ.
ಚಪಾತಿ 2 ಪಲ್ಯ – 10 ರೂ.