HomeKarnatakaBIG NEWS: ಕಾಂಗ್ರೆಸ್ ನಿಂದ ಗೂಂಡಾಗಿರಿ ರಾಜಕೀಯ ನಡೆಯುತ್ತಿದೆ; ಆರ್. ಅಶೋಕ್ ವಾಗ್ದಾಳಿ

BIG NEWS: ಕಾಂಗ್ರೆಸ್ ನಿಂದ ಗೂಂಡಾಗಿರಿ ರಾಜಕೀಯ ನಡೆಯುತ್ತಿದೆ; ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಬಿಜೆಪಿಯವರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದೆ ಎಂದು ಮಾಜಿ ಸಚಿವ ಆರ್. ಅಶೋಕ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಕಾಂಗ್ರೆಸ್ ನಿಂದ ಗೂಂಡಾಗಿರಿ ರಾಜಕಾರಣ ನಡೆಯುತ್ತಿದೆ. ನಮಗೆ ಮಾತನಾಡಲೂ ಅವಕಾಶ ಕೊಡದೇ ನಮ್ಮನ್ನು ಸ್ಟೇಷನ್ ಗೆ ಕರೆದುಕೊಂಡು ಬಂದು ಕೂರಿಸಿದ್ದಾರೆ. ಅಧಿಕಾರಕ್ಕೆ ಬಂದ ದಿನದಿಂದ ದಬ್ಬಾಳಿಕೆ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ 10ಕೆಜಿ ಅಕ್ಕಿ ಯೋಜನೆ ಬರೀ ಸುಳ್ಳು. ಪ್ರಧಾನಿ ಮೋದಿ ಕೊಡುವ 5 ಕೆಜಿ ಅಕ್ಕಿ ಮಾತ್ರ ಗ್ಯಾರಂಟಿ ಯೋಜನೆಯಾಗಿದೆ. ಕಾಂಗ್ರೆಸ್ ನವರು ಘೋಷಿಸಿರುವ 5 ಗ್ಯಾರಂಟಿಯೂ ಸುಳ್ಳೇ. ಅವರ ಗ್ಯಾರಂಟಿಗಳಿಗೆ ಈಗ ಕಂಡಿಷನ್ ಹಾಕುತ್ತಿದ್ದಾರೆ. ಗ್ಯಾರಂಟಿ ಭರವಸೆ ಕೊಟ್ಟು ಕಾಂಗ್ರೆಸ್ ನವರು ಬಡವರ ಹೊಟ್ಟೆಯ ಮೇಲೂ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

For Latest News Updates, Join Our Whatsapp Community🚩
RELATED ARTICLES

Most Popular