ಬೆಂಗಳೂರು: ಸಚಿವ ಎಂ.ಬಿ. ಪಾಟೀಲ್ ಸಿಎಂ ಸಿದ್ದರಾಮಯ್ಯ ಅವರ ಚೇಲಾ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿರುವ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ನಾನು ಯಾರ ಚೇಲಾ ಅಲ್ಲ. ಅವರಿಗೆ ಚೇಲಾ ಆಗಿರುವ ಅನುಭವ ಇರಬಹುದು ಎಂದು ಟಾಂಗ್ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ. ಪಾಟೀಲ್, ನಾನು ಕಾಂಗ್ರೆಸ್ ಪಕ್ಷದ ಚೇಲಾ, ಯಾರಿಗು ಚೇಲಾ ಅಲ್ಲ, ನಾನು ಸಿದ್ದರಾಮಯ್ಯನವರಿಗಿಂತ ಮುಂಚೆ ಕಾಂಗ್ರೆಸ್ ಗೆ ಬಂದವನು. ಆರು ಬಾರಿ ಶಾಸಕ, ಒಂದು ಬಾರಿ ಸಂಸದನಾಗಿ ಕೆಲಸ ಮಾಡಿದ್ದೇನೆ. ಪ್ರತಾಪ್ ಸಿಂಹಗೆ ಚೇಲಾ ಕೆಲಸ ಮಾಡಿದ ಅನುಭವವಿರಬೇಕು ಅದಕ್ಕೆ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ನನ್ನ ಹೆಗಲ ಮೇಲೆ ಸಿದ್ದರಾಮಯ್ಯ ಬಂದೂಕು ಇಟ್ಟು ಹೊಡೆಯುತ್ತಿದ್ದಾರೆ ಎಂಬ ಹೇಳಿಕೆಗೂ ಪ್ರತಿಕ್ರಿಯಿಸಿರುವ ಎಂ.ಬಿ. ಪಾಟೀಲ್, ನನ್ನ ಹೆಗಲ ಮೇಲೆ ಯಾರೂ ಬಂದೂಕು ಇಟ್ಟು ಹೊಡೆಯುತ್ತಿಲ್ಲ. ಯಾರಿಗಾದರೂ ಹೊಡೆಯಬೇಕು ಎಂದರೆ ನಾನೇ ಹೊಡೆಯುತ್ತೇನೆ. ನಾನು ವಿಜಯಪುರದವನು. ಆ ಶಕ್ತಿ ನನಗಿದೆ ಎಂದು ಗುಡುಗಿದ್ದಾರೆ.