ಬಲ್ಲಿಯಾ: ಬಿಸಿಗಾಳಿಗೆ (Heatwave) ಉತ್ತರ ಪ್ರದೇಶ(Uttar pradesh) ದ ಬಲ್ಲಿಯಾ ಜಿಲ್ಲಾ ಆಸ್ಪತ್ರೆಯಲ್ಲಿ (Ballia District Hospital) ನಾಲ್ಕೇ ದಿನದಲ್ಲಿ 57 ಜನರು ಸಾವನ್ನಪ್ಪಿದ್ದಾರೆ (57 Dead) ಎಂದು ವರದಿಯಾಗಿದೆ.
ಈ ಪ್ರದೇಶದಲ್ಲಿ ಬಿಸಿಗಾಳಿಗೆ ಕಳೆದ 4 ದಿನಗಳಿಂದ 57 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಬಲ್ಲಿಯಾ ಮುಖ್ಯ ವೈದ್ಯಕೀಯ ಅಧಿಕಾರಿ (ಸಿಎಂಒ) ಡಾ.ಜಯಂತ್ ಕುಮಾರ್ ಅವರು ಭಾನುವಾರದವರೆಗೆ ಜಿಲ್ಲೆಯಲ್ಲಿ ಬಿಸಿಗಾಳಿಯಿಂದ ಕೇವಲ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು.
ಬಲ್ಲಿಯಾ ಜಿಲ್ಲಾ ಆಸ್ಪತ್ರೆಯ ವಾರ್ಡ್ಗಳನ್ನು ಪರಿಶೀಲಿಸಿದ ನಿರ್ದೇಶಕ ಡಾ.ಎ.ಕೆ.ಸಿಂಗ್ ಮತ್ತು ವೈದ್ಯಕೀಯ ಆರೈಕೆ ನಿರ್ದೇಶಕ ಕೆ.ಎನ್.ತಿವಾರಿ ಅವರನ್ನೊಳಗೊಂಡ ಇಬ್ಬರು ಸದಸ್ಯರ ಸಮಿತಿಯು ಜಿಲ್ಲೆಯಲ್ಲಿ ವಯಸ್ಸಾದ ರೋಗಿಗಳ ಸಾವಿನ ಹೆಚ್ಚಳಕ್ಕೆ ತೀವ್ರ ಬಿಸಿಗಾಳಿಯೇ ಮುಖ್ಯ ಕಾರಣ ಎಂದು ಹೇಳಿದ್ದಾರೆ.
ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ (ಸಿಎಂಎಸ್) ಡಾ.ದಿವಾಕರ್ ಸಿಂಗ್ ಅವರು ಸಾವಿಗೆ ಕಾರಣದ ಬಗ್ಗೆ ಅಜಾಗರೂಕ ಹೇಳಿಕೆ ನೀಡಿದ ಆರೋಪದ ಮೇಲೆ ಅವರನ್ನು ತೆಗೆದುಹಾಕಿ ಅಜಂಗಢಕ್ಕೆ ವರ್ಗಾವಣೆ ಮಡಲಾಗಿದೆ. ಆಸ್ಪತ್ರೆಯಲ್ಲಿ 20 ಕ್ಕೂ ಹೆಚ್ಚು ರೋಗಿಗಳು ಬಿಸಿಗಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಶುಕ್ರವಾರ ಹೇಳಿದ್ದರು.