ಆರೋಗ್ಯ ಚೆನ್ನಾಗಿರಬೇಕೆಂದರೆ ತಾಜಾ ತರಕಾರಿಗಳನ್ನು ತಿನ್ನಬೇಕು. ಅನೇಕ ತರಕಾರಿಗಳು ನಮಗೆ ಇಷ್ಟವಿಲ್ಲದಿದ್ದರೂ ತಿನ್ನಲೇಬೇಕು. ಚಿಕ್ಕಂದಿನಲ್ಲಿ ನಾವು ಇಷ್ಟಪಡದ ತರಕಾರಿಗಳ ಮಹತ್ವ ದೊಡ್ಡವರಾದ ಮೇಲೆ ತಿಳಿಯುತ್ತದೆ. ಯಾಕೆಂದರೆ ತರಕಾರಿಗಳ ಪೌಷ್ಟಿಕಾಂಶದ ಮೌಲ್ಯವು ತುಂಬಾ ಹೆಚ್ಚಾಗಿದೆ. ಸಾಮಾನ್ಯವಾಗಿ ನಾವು ಹಸಿರು ಬೆಂಡೆಕಾಯಿಯನ್ನು ಸೇವಿಸುತ್ತೇವೆ. ಕೆಂಪು ಬೆಂಡೆಕಾಯಿ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ, ಆದರೆ ಇದನ್ನು ನೋಡಿರುವವರು ಅಪರೂಪ. ಇದನ್ನು ಹೊಲಗಳಲ್ಲಿಯೂ ಬೆಳೆಯಲಾಗುತ್ತದೆ. ಇದರ ಇಳುವರಿ ಕಡಿಮೆ ಇರುವುದರಿಂದ ಕೊಂಚ ದುಬಾರಿ ಬೆಲೆಗೆ ಮಾರಲಾಗುತ್ತದೆ.
ಯಾವ ಬೆಂಡೆಕಾಯಿ ಹೆಚ್ಚು ಪ್ರಯೋಜನಕಾರಿ?
ಹಸಿರು ಬೆಂಡೆಕಾಯಿ ಮತ್ತು ಕೆಂಪು ಬೆಂಡೆಕಾಯಿಯಲ್ಲಿ ಆರೋಗ್ಯಕ್ಕೆ ಯಾವ ತರಕಾರಿ ಹೆಚ್ಚು ಪ್ರಯೋಜನಕಾರಿ ಎಂಬ ಪ್ರಶ್ನೆ ಸಾಮಾನ್ಯವಾಗಿ ಜನರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಕೆಂಪು ಬೆಂಡೆಯನ್ನು ಕಾಶಿ ಲಾಲಿಮಾ ಭಿಂಡಿ ಎಂದೂ ಕರೆಯುತ್ತಾರೆ. ಏಕೆಂದರೆ ಇದನ್ನು ಕೆಲವು ವರ್ಷಗಳ ಹಿಂದೆ ವಾರಣಾಸಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವೆಜಿಟೇಬಲ್ಸ್ ತಯಾರಿಸಿದೆ. ಇದನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿ, ಹಸಿರು ಬೆಂಡೆಕಾಯಿಗಿಂತ ಕೆಂಪು ಬೆಂಡೆ ಹೆಚ್ಚು ಪೌಷ್ಟಿಕವಾಗಿದೆ ಎಂದು ನಂಬುತ್ತಾರೆ.
ಕ್ಲೋರೊಫಿಲ್‌ನಿಂದಾಗಿ ಸಾಮಾನ್ಯ ಬೆಂಡೆಕಾಯಿಯ ಬಣ್ಣವು ಹಸಿರು ಬಣ್ಣದ್ದಾಗಿರುತ್ತದೆ. ಅದೇ ರೀತಿ ಆಂಥೋಸಯಾನಿನ್ ಎಂಬ ವರ್ಣದ್ರವ್ಯದಿಂದಾಗಿ ಈ ಬೆಂಡೆಕಾಯಿಯ ಬಣ್ಣವು ಕೆಂಪು ಬಣ್ಣದ್ದಾಗಿದೆ. ಹಸಿರು ಬೆಂಡೆಕಾಯಿಗೆ ಹೋಲಿಸಿದರೆ ಕೆಂಪು ಬೆಂಡೆಕಾಯಿಯನ್ನು ತಿನ್ನುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮತ್ತು ಕಬ್ಬಿಣದ ಮಟ್ಟ ಶೇ. 30ರಷ್ಟು ಹೆಚ್ಚಾಗುತ್ತದೆ. ಕೆಂಪು ಬೆಂಡೆ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.
ಕೆಂಪು ಬೆಂಡೆಕಾಯಿ ಪ್ರಯೋಜನಗಳು
– ವಿಟಮಿನ್ ಬಿ ಮತ್ತು ಫೋಲೇಟ್ ಕೆಂಪು ಬೆಂಡೆಕಾಯಿಯಲ್ಲಿ ಅಧಿಕವಾಗಿದೆ, ಆದ್ದರಿಂದ ಗರ್ಭಿಣಿಯರಿಗೆ ಇದು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.
– ಹೆಚ್ಚು ಕೆಂಪು ಬೆಂಡೆ ಸೇವನೆಯಿಂದ ಟೈಪ್ -2 ಮಧುಮೇಹದ ಅಪಾಯವು ಕಡಿಮೆಯಾಗುತ್ತದೆ. ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ.
– ಹೃದ್ರೋಗದ ಅಪಾಯವಿರುವವರು ಕೆಂಪು ಬೆಂಡೆಕಾಯಿಯನ್ನು ತಿನ್ನಬೇಕು. ಏಕೆಂದರೆ ಇದು ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.