HomeKarnatakaBIG NEWS: ನಿಮಗ್ಯಾಕೆ ಬ್ರಾಹ್ಮಣರ ಮೇಲೆ ಇಷ್ಟೊಂದು ದ್ವೇಷ.....? ಲಿಂಗಾಯಿತ ಧರ್ಮ ಒಡೆಯುವಾಗ ಸುಪಾರಿ ಪಡೆದಿದ್ದು...

BIG NEWS: ನಿಮಗ್ಯಾಕೆ ಬ್ರಾಹ್ಮಣರ ಮೇಲೆ ಇಷ್ಟೊಂದು ದ್ವೇಷ…..? ಲಿಂಗಾಯಿತ ಧರ್ಮ ಒಡೆಯುವಾಗ ಸುಪಾರಿ ಪಡೆದಿದ್ದು ನೀವೆ; ಈಗ ಒಕ್ಕಲಿಗರನ್ನು ಮುಗಿಸಲು ಹೊರಟಿದ್ದೀರಾ….? ಸಚಿವ ಎಂ.ಬಿ. ಪಾಟೀಲ್ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ

ಮೈಸೂರು: ಸಚಿವ ಎಂ.ಬಿ. ಪಾಟೀಲ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ಮುಂದುವರೆಸಿದ್ದಾರೆ. ಲಿಂಗಾಯಿತ ಧರ್ಮ ಒಡೆಯಲು ಸುಪಾರಿ ಪಡೆದಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಬಿ.ಎಲ್. ಸಂತೋಷ್ ಬಗ್ಗೆ ಎಂ.ಬಿ. ಪಾಟೀಲ್ ವ್ಯಂಗ್ಯವಾಡಿರುವ ವಿಚಾರವಾಗಿ ಕಿಡಿ ಕಾರಿದ್ದು, ಬಿ.ಎಲ್. ಸಂತೋಷ್ ಬಗ್ಗೆ ಪದೇ ಪದೆ ಯಾಕೆ ಮಾತನಾಡುತ್ತೀರಾ ? ಬ್ರಾಹ್ಮಣರನ್ನು ಪ್ರತಿ ದಿನವೂ ಯಾಕೆ ಬೈಯ್ಯುತ್ತೀರಾ ? ನಿಮಗೆ ಯಾಕೆ ಬ್ರಾಹ್ಮಣರ ಮೇಲೆ ಇಷ್ಟೊಂದು ದ್ವೇಷ ? ಬಸವೇಶ್ವರರು ಮೂಲದಲ್ಲಿ ಬ್ರಾಹ್ಮಣರಲ್ವಾ? ಎಂದು ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಿ.ಎಲ್. ಸಂತೋಷ್ ನಿಮಗೆ ಹಾಗೂ ಕಾಂಗ್ರೆಸ್ ಗೆ ತಿವಿದಿದ್ದಾರಾ ? ಎಂ. ಬಿ. ಪಾಟೀಲ್ ಅವರೇ ನಿಜವಾಗಿಯೂ ನೀವು ಲಿಂಗಾಯಿತರಾ ? ಯಡಿಯೂರಪ್ಪ ಅವರನ್ನು ಜೈಲಿಗೆ ಕಳುಹಿಸಿದ್ದು ಕಾಂಗ್ರೆಸ್ ಕುತಂತ್ರ ಅಲ್ವಾ ? ಲಿಂಗಾಯಿತರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದ್ರೂ ಸುಮ್ಮನೇ ಇದ್ದೀರಿ ? ಯಡಿಯೂರಪ್ಪ ಅವರನ್ನು ದಿನೇಶ್ ಗುಂಡೂರಾವ್ ಹುಚ್ಚ ಎಂದಿದ್ದರು. ಬಿ ಎಸ್ ವೈ ವಿರುದ್ಧ ಷಡ್ಯಂತ್ರಕ್ಕೆ ಸುಪಾರಿ ತೆಗೆದುಕೊಂಡಿದ್ದು ನೀವೆ ತಾನೇ ? ಲಿಂಗಾಯಿತ ಧರ್ಮ ಒಡೆಯುವಾಗ ಸುಪಾರಿ ಪಡೆದಿದ್ದು ನೀವೆ ಅಲ್ವಾ ? ಎಂದು ಸರಣಿ ಪ್ರಶ್ನೆ ಕೇಳಿದ್ದಾರೆ.

ಈಗ ಸಿದ್ದರಾಮಯ್ಯನವರೇ ಪೂರ್ಣಾವಧಿ ಮುಖ್ಯಮಂತ್ರಿ ಎಂದು ಹೇಳುತ್ತಿದ್ದೀರಿ ಈ ಮೂಲಕ ಒಕ್ಕಲಿಗರನ್ನು ಮುಗಿಸಲು ಹೊರಟಿದ್ದೀರಾ ನೀವು ? ಸಿದ್ದರಾಮಯ್ಯನವರ ಚೇಲಾ ಪಡೆಯ ಅಧ್ಯಕ್ಷ ಎಂ.ಬಿ. ಪಾಟೀಲ್ ಎಂದು ವಾಕ್ಪ್ರಹಾರ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular