HomeInternationalಮದ್ಯದ ಅಮಲಲ್ಲಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ವಿದ್ಯಾರ್ಥಿಗೆ ಜೈಲು ಶಿಕ್ಷೆ

ಮದ್ಯದ ಅಮಲಲ್ಲಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ವಿದ್ಯಾರ್ಥಿಗೆ ಜೈಲು ಶಿಕ್ಷೆ

ಬ್ರಿಟನ್‌ ನಲ್ಲಿ ಮದ್ಯ ಸೇವಿಸಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಭಾರತೀಯ ಮೂಲದ ವಿದ್ಯಾರ್ಥಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಯುನೈಟೆಡ್ ಕಿಂಗ್‌ ಡಂನ ಕಾರ್ಡಿಫ್‌ ನಲ್ಲಿ ಘಟನೆ ನಡೆದಿದೆ. ಕುಡಿದು ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಕ್ಕಾಗಿ ಭಾರತೀಯ ಮೂಲದ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿ ನಂತರ ಜೈಲಿನಲ್ಲಿರಿಸಲಾಯಿತು. ಕಳೆದ ವರ್ಷ ಜೂನ್‌ ನಲ್ಲಿ 20 ವರ್ಷದ ಪ್ರೀತ್ ವಿಕಲ್ ಎಂಬಾತ ಕುಡಿದ ಅಮಲಿನಲ್ಲಿದ್ದ ಮಹಿಳೆಯನ್ನು ಕಾರ್ಡಿಫ್ ನಗರದ ತನ್ನ ಫ್ಲಾಟ್‌ ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿ ಮತ್ತು ಮಹಿಳೆ ಪ್ರತ್ಯೇಕವಾಗಿ ತಮ್ಮ ತಮ್ಮ ಗುಂಪುಗಳೊಂದಿಗೆ ನಗರದಲ್ಲಿ ರಾತ್ರಿ ವಿಹಾರಕ್ಕೆ ಹೋಗಿದ್ದರು. ಮಹಿಳೆ ಅತಿಯಾಗಿ ಕುಡಿದಿದ್ದರು. ಅವಳು ಕ್ಲಬ್‌ನಿಂದ ಹೊರಗೆ ಬಂದಾಗ ಪ್ರೀತ್ ವಿಕಲ್‌ ಎದುರಾಗಿದ್ದಾನೆ. ನಂತರ ಆಕೆಯನ್ನು ತನ್ನ ಫ್ಲ್ಯಾಟ್ ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular