ಬಾಲಿವುಡ್‌ನ ನವಾಬ ಎಂದೇ ಖ್ಯಾತರಾದ ಸೈಫ್ ಅಲಿ ಖಾನ್ ಇತ್ತೀಚೆಗೆ ಬಿಡುಗಡೆಯಾದ ’ಆದಿಪುರುಷ್’ ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ರಾವಣನ ಪಾತ್ರ ನಿಭಾಯಿಸಿರುವ ಸೈಫ್ ಅಲಿ ಖಾನ್, ಪ್ರಮೋಷನ್ ವೇಳೆ ಎಲ್ಲೂ ಕಾಣಸಿಗಲಿಲ್ಲ.
’ಈಸ್ಟ್ ಇಂಡಿಯಾ ಕಾಮಿಡಿ’ಯ ಟಾಕ್‌ಶೋ ಒಂದರಲ್ಲಿ ಮಾತನಾಡಿದ್ದ ಸೈಫ್ ಬ್ರೂನಿ ಸುಲ್ತಾನನ ಮಗಳಿಂದ ತಮಗೆ ಸಿಕ್ಕಿರುವ ದುಬಾರಿ ಉಡುಗೊರೆಯೊಂದರ ಕುರಿತು ಮಾತನಾಡಿದ್ದರು. ಸುಲ್ತಾನನ ಮಗಳು ಬಾಲಿವುಡ್‌ನ ಬಹಳ ದೊಡ್ಡ ಅಭಿಮಾನಿಯಾಗಿದ್ದು, ಸೈಫ್ ಇತ್ತೀಚೆಗೆ ಸುಲ್ತಾನನ ಭೇಟಿಯಾದ ಸಂದರ್ಭ ಈ ಉಡುಗೊರೆ ಸ್ವೀಕರಿಸಿದ್ದಾರೆ.
ವಜ್ರ ಖಚಿತ ರೋಲೆಕ್ಸ್ ವಾಚ್ ಅನ್ನು ಸುಲ್ತಾನನ ಮಗಳಿಂದ ಸೈಫ್ ಉಡುಗೊರೆಯಾಗಿ ಪಡೆದಿದ್ದಾರೆ. ಈ ವಾಚ್ ಕುರಿತಂತೆ ಸೈಫ್ ಒಂದು ಕಥೆ ಹೇಳಿಕೊಂಡಿದ್ದಾರೆ.
ಈ ವಾಚನ್ನು ಚಿತ್ರ ನಿರ್ಮಾಪಕ ರಮೇಶ್ ತುರಾನಿಗೆ ಮಾರಾಟ ಮಾಡಲು ಮುಂದಾಗಿದ್ದಾಗಿ ತಿಳಿಸಿದ ಸೈಫ್, ಕೊನೆಗೆ ರಮೇಶ್ ಅದನ್ನು ಖರೀದಿ ಮಾಡದೇ ಇದ್ದ ಕಾರಣ ತಮ್ಮ ಮಡದಿ ಕರೀನಾ ಕಪೂರ್‌ಗೆ ಆ ವಾಚ್ ಕೊಟ್ಟಿದ್ದಾಗಿ ತಿಳಿಸಿದ್ದಾರೆ.