alex Certify ಇಂದಿನ ಸಿರಿವಂತರಾದ ಇಲಾನ್ ಮಸ್ಕ್, ಅಂಬಾನಿಯನ್ನೂ ಮೀರಿಸಿದ್ದರು ಸೂರತ್ ನ ಈ ಶ್ರೀಮಂತ ವ್ಯಾಪಾರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದಿನ ಸಿರಿವಂತರಾದ ಇಲಾನ್ ಮಸ್ಕ್, ಅಂಬಾನಿಯನ್ನೂ ಮೀರಿಸಿದ್ದರು ಸೂರತ್ ನ ಈ ಶ್ರೀಮಂತ ವ್ಯಾಪಾರಿ….!

ಇಲಾನ್ ಮಸ್ಕ್ , ಅಂಬಾನಿ, ಅದಾನಿ ಸೇರಿದಂತೆ ಹಲವು ಶ್ರೀಮಂತರ ವಿಶ್ವದ ಅಗ್ರಗಣ್ಯ ಸಿರಿವಂತರ ಸಾಲಿನಲ್ಲಿ ಸೇರುತ್ತಾರೆ. ಆದರೆ ಇವರನ್ನೂ ಮೀರಿಸಿದ ವ್ಯಕ್ತಿಯೊಬ್ಬರು ಭಾರತದಲ್ಲಿ ಅತ್ಯಂತ ಶ್ರೀಮಂತರಾಗಿದ್ದರು.

ಸೂರತ್ ಮೂಲದ ಉದ್ಯಮಿ ವಿರ್ಜಿ ವೋರಾ (ವಿರ್ಜಿ ವೋಹ್ರಾ) ಅವರು ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಯಾಗಿದ್ದರು ಎಂದು ವರದಿಯಾಗಿದೆ.

ಭಾರತದಲ್ಲಿ ಮೊಘಲ್ ಯುಗದಲ್ಲಿ ದೊಡ್ಡ ಹೆಸರಾಗಿದ್ದ ಅವರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯಿಂದ ಅತ್ಯಂತ ಶ್ರೀಮಂತ ಉದ್ಯಮಿ ಎಂದು ಇತಿಹಾಸದಲ್ಲಿ ಗುರುತಿಸಲ್ಪಟ್ಟಿದ್ದರು. ಅವರ ವೈಯಕ್ತಿಯ ಸಂಪತ್ತಿನ ಮೌಲ್ಯ 8 ಮಿಲಿಯನ್ (ರೂ. 80 ಲಕ್ಷ ರೂ. ) ರೂಪಾಯಿಗಳಾಗಿತ್ತು.

1590 ರಲ್ಲಿ ಜನಿಸಿದ್ದ ವಿರ್ಜಿ ವೋರಾ ತಮ್ಮ ಕೆಲಸ ಮತ್ತು ಆರ್ಥಿಕ ಗಳಿಕೆಗಾಗಿ ಮನ್ನಣೆ ಪಡೆಯುವಲ್ಲಿ ಎಂದಿಗೂ ವಿಫಲರಾಗಲಿಲ್ಲ. 1617 ಮತ್ತು 1670 ರ ನಡುವೆ ಈಸ್ಟ್ ಇಂಡಿಯಾ ಕಂಪನಿಗೆ ಹಣಕಾಸು ಒದಗಿಸುವಲ್ಲಿ ವೋರಾ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ ಎಂದು ವ್ಯಾಪಾರ ವಲಯದ ವಿದ್ವಾಂಸರು ನಂಬಿದ್ದಾರೆ. ಆ ಸಮಯದಲ್ಲಿ, ಅವರು ಬ್ರಿಟೀಷ್ ಮತ್ತು ಡಚ್ ಈಸ್ಟ್ ಇಂಡಿಯಾ ಕಂಪನಿಗಳ ಗ್ರಾಹಕರು ಮತ್ತು ಸಾಲದ ಪ್ರಮುಖ ಮೂಲವಾಗಿದ್ದರು.

ವಿರ್ಜಿ ವೋರಾ ಉತ್ಪನ್ನದ ಸಂಪೂರ್ಣ ದಾಸ್ತಾನನ್ನು ಖರೀದಿಸಿ ಭಾರೀ ಲಾಭಕ್ಕೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಅವರನ್ನು ವಿವಿಧ ಸಂದರ್ಭಗಳಲ್ಲಿ ‘ವ್ಯಾಪಾರಿ ರಾಜಕುಮಾರ’ ಮತ್ತು ‘ಪ್ಲುಟೊಕ್ರಾಟ್’ ಎಂದು ಉಲ್ಲೇಖಿಸಲಾಗಿದೆ.

ಅಲ್ಲದೆ ಈ ಭಾರತೀಯ ಉದ್ಯಮಿ ತಮ್ಮ ಸ್ವಂತ ಖಾಸಗಿ ವ್ಯವಹಾರಗಳನ್ನು ಮುಂದುವರಿಸಲು ಸಿದ್ಧರಿರುವ ಬ್ರಿಟಿಷರಿಗೆ ಸಾಲ ನೀಡುತ್ತಿದ್ದರು. ಮೊಘಲ್ ಚಕ್ರವರ್ತಿ ಔರಂಗಜೇಬನು ವೋರಾರಿಂದ ಹಣ ಸಹಾಯವನ್ನು ಕೇಳಿದ್ದನು ಎಂದು ನಂಬಲಾಗಿದೆ.

17 ನೇ ಶತಮಾನದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಪ್ರಮುಖ ಹಣಕಾಸುದಾರರಾಗಿ ಸೇವೆ ಸಲ್ಲಿಸಿದ ವಿರ್ಜಿ ವೋರಾ 1670 ರಲ್ಲಿ ನಿಧನರಾದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...