ಟ್ವಿಟರ್‌ನಲ್ಲಿ ಸಕ್ರಿಯರಾಗಿರುವ ಉದ್ಯಮಿಗಳಲ್ಲಿ ಒಬ್ಬರು ಆರ್‌ಪಿಜಿ ಸಮೂಹದ ಚೇರ್ಮನ್ ಹರ್ಷ್ ಗೋಯೆಂಕಾ. ಭಾರತೀಯ ಚಿತ್ರರಂಗದ ಸಂಗೀತ ಲೋಕದ ದಂತಕಥೆ ಲತಾ ಮಂಗೇಶ್ಕರ್ ಅವರು ಮತ್ತೊಬ್ಬ ಸಂಗೀತ ಗಾರುಡಿಗ ಕೆ.ಎಲ್. ಸೈಗಲ್‌ರೊಂದಿಗೆ ಡ್ಯುಯೆಟ್ ಹಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ ಗೋಯೆಂಕಾ.
ಇದರಲ್ಲಿ ಅಚ್ಚರಿಯ ಸಂಗತಿ ಏನು ಅಂದ್ರಾ? ಸೈಗಲ್‌ರೊಂದಿಗೆ ಡ್ಯುಯೆಟ್ ಹಾಡಬೇಕೆಂಬ ಅಗಾಧ ಆಸೆಯನ್ನು ಲತಾ ಮಂಗೇಶ್ಕರ್‌ರ ಬಯಕೆ ಈಡೇರಲೇ ಇಲ್ಲ. ಆದರೆ ಆಧುನಿಕ ತಂತ್ರಜ್ಞಾನ ಈ ಸಾಧ್ಯತೆಯನ್ನು ವರ್ಚುವಲ್ ಆಗಿ ಈಡೇರಿಸಿದೆ…!
’ಮೈನ್ ಕ್ಯಾ ಜಾನೂ ಕ್ಯಾ ಜಾದೂ ಹೈನ್’ ಎಂಬ ಈ ಹಾಡನ್ನು ಸೆಪ್ಟೆಂಬರ್ 28, 2021ರಲ್ಲಿ ಬಿಡುಗಡೆ ಮಾಡಲಾಗಿದೆ. ಲತಾ ಮಂಗೇಶ್ಕರ್‌ರ 92ನೇ ಹುಟ್ಟುಹಬ್ಬದ ವೇಳೆ ಈ ಹಾಡನ್ನು ಬಿಡುಗಡೆ ಮಾಡಲಾಗಿತ್ತು.
ಲತಾರ ಸಹೋದರ ಸಂಬಂಧಿ ಬೈಜು ಮಂಗೇಶ್ಕರ್ ಹಾಗೂ ಕಾಂಪೋಸರ್ ಜತಿನ್ ಶರ್ಮಾ ರಚಿಸಿದ್ದರು. ತಂತ್ರಜ್ಞಾನದ ನೆರವಿನಿಂದ ಇಬ್ಬರು ದಿಗ್ಗಜರ ದನಿಗಳನ್ನು ಒಂದೇ ಹಾಡಿನಲ್ಲಿ ತರುವ ಬಯಕೆ ಹೀಗೆ ಈಡೇರಿತ್ತು.
Lata Mangeshkar had a dream of singing a duet with KL Saigal which never happened. Her nephew Baiju Mangeshkar and music composer Jatin created a duet using their voices with the help of modern technology !!! A gift to Lataji on her birthday which pleased her to no end 😀💎🎶. pic.twitter.com/Dpr4nuEOCk
— Harsh Goenka (@hvgoenka) June 15, 2023
Amazing and deep appreciations for sharing kudos !
— DrMadhuTeckchandani (@msteckchandani) June 15, 2023
This is so so amazing.. Just loved it
— 〰️HIRA-MEHTA〰️ (@HIRAMEHTA3) June 15, 2023

