ಅಪ್ಪ-ಅಮ್ಮ ಮಲಗಿದ್ದಾಗ ಬಾಲ್ಕನಿಯಿಂದ ಕೆಳಗೆ ಬಿದ್ದು 5 ವರ್ಷದ ಮಗು ಸಾವನ್ನಪ್ಪಿದ ಘಟನೆ ಸೆಕ್ಟರ್ 113 ಪೊಲೀಸ್ ಠಾಣೆ ವ್ಯಾಪ್ತಿಯ ಸೆಕ್ಟರ್ 78 ರ ಹೈಡ್ ಪಾರ್ಕ್ ಸೊಸೈಟಿಯಲ್ಲಿ ಗುರುವಾರ ನಡೆದಿದೆ.
ಅಪ್ಪ ಅಮ್ಮನಿಗೆ ಗೊತ್ತಾಗದ ಹಾಗೆ ರೂಮ್ ನಿಂದ ಹೊರಗೆ ಬಂದ ಮಗು ಬಾಲ್ಕನಿ ಗ್ರಿಲ್ನಿಂದ ಕೆಳಗೆ ಬಿದ್ದಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಮಗುವನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಗು ಬದುಕುಳಿಯಲಿಲ್ಲ ಎಂದು ತಿಳಿದು ಬಂದಿದೆ. ಅಕ್ಷಯ್ ಎಂಬ 5 ಮಗು ಮೃತಪಟ್ಟಿದ್ದಾನೆ ಎಂದು ಗುರುತಿಸಲಾಗಿದೆ.
ಅಪ್ಪ ಅಮ್ಮನ ಜೊತೆ ಮಲಗಿದ್ದ ಬಾಲಕ ಇದ್ದಕ್ಕಿಂದಂತೆ ಎದ್ದು ಹೋಗಿದ್ದಾನೆ , “ಕೆಲವೊಮ್ಮೆ ಮಗು ಇತರರಿಗಿಂತ ಮುಂಚಿತವಾಗಿ ಎದ್ದು ಮನೆಯಲ್ಲಿ ತಿರುಗಾಡುತ್ತಿತ್ತು ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಘಟನೆ ಸಂಬಂಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.