alex Certify ವೇಗವಾಗಿ ತೂಕ ಇಳಿಸಲು ನೆಲದ ಮೇಲೆ ವಾಕಿಂಗ್‌ ಅಥವಾ ಟ್ರೆಡ್‌ಮಿಲ್‌ ಯಾವುದು ಬೆಸ್ಟ್‌…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇಗವಾಗಿ ತೂಕ ಇಳಿಸಲು ನೆಲದ ಮೇಲೆ ವಾಕಿಂಗ್‌ ಅಥವಾ ಟ್ರೆಡ್‌ಮಿಲ್‌ ಯಾವುದು ಬೆಸ್ಟ್‌…..?

ತೂಕ ಇಳಿಸಿಕೊಳ್ಳಲು ಅನೇಕರು ಟ್ರೆಡ್‌ಮಿಲ್‌ನಲ್ಲಿ ವಾಕಿಂಗ್‌ ಮತ್ತು ಜಾಗಿಂಗ್‌ ಮಾಡ್ತಾರೆ. ಆದರೆ ಇದು ಸೂಕ್ತವೇ? ನೆಲದ ಮೇಲೆ ನಡೆಯುವುದು ಇದಕ್ಕಿಂತಲೂ ಉತ್ತಮವೇ ಅನ್ನೋ ಪ್ರಶ್ನೆ ಸಾಮಾನ್ಯವಾಗಿ ಮೂಡುತ್ತದೆ. ವಾಕಿಂಗ್ ಉತ್ತಮ ವ್ಯಾಯಾಮಗಳಲ್ಲಿ ಒಂದಾಗಿದೆ. ದೈನಂದಿನ ದಿನಚರಿಯಲ್ಲಿ ವಾಕಿಂಗ್ ಅನ್ನು ಸೇರಿಸಿದರೆ ಹೃದ್ರೋಗ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮತ್ತು ಮಧುಮೇಹದ ಅಪಾಯವು ಗಣನೀಯವಾಗಿ ಕಡಿಮೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನರು ಜಿಮ್‌ಗೆ ಹೋಗುತ್ತಾರೆ ಮತ್ತು ಟ್ರೆಡ್‌ಮಿಲ್‌ನಲ್ಲಿ ನಡೆಯುತ್ತಾರೆ.

ಇದಕ್ಕಾಗಿ ಅವರು ಹೆಚ್ಚುವರಿ ಹಣವನ್ನೂ ಖರ್ಚು ಮಾಡಬೇಕಾಗುತ್ತದೆ. ಫಿಟ್ನೆಸ್ ತಜ್ಞರ ಪ್ರಕಾರ, ಟ್ರೆಡ್ ಮಿಲ್‌ನಲ್ಲಿ ವಾಕಿಂಗ್ ಮತ್ತು ನೆಲದ ಮೇಲೆ ವಾಕಿಂಗ್ನಿಂದ ಸಿಗುವ ಫಲಿತಾಂಶಗಳು ವಿಭಿನ್ನವಾಗಿವೆ. ರಸ್ತೆಯಲ್ಲಿ, ಉದ್ಯಾನವನದಲ್ಲಿ ಅಥವಾ ಬೇರೆಡೆ ನಡೆಯುವಾಗ, ಗಾಳಿಯ ಒತ್ತಡವು ದೇಹದ ಮೇಲೆ ಬೀಳುತ್ತದೆ. ಇದರೊಂದಿಗೆ  ಮುಂದುವರಿಯಲು ಹೆಚ್ಚು ಶ್ರಮಿಸಬೇಕು. ಅಷ್ಟೇ ಅಲ್ಲ ನಡೆಯುವಾಗ ದಾರಿಯೂ ಒಂದೇ ಆಗಿರುವುದಿಲ್ಲ, ಆಗ ತೂಕವು ವೇಗವಾಗಿ ಕಡಿಮೆಯಾಗುತ್ತದೆ. ಟ್ರೆಡ್‌ಮಿಲ್‌ನಲ್ಲಿ ಗಾಳಿ ಇಲ್ಲದಿರುವುದರಿಂದ ನೀವು ಆರಾಮವಾಗಿ ನಡೆಯುತ್ತೀರಿ. ಹಾಗಾಗಿ ಟ್ರೆಡ್‌ಮಿಲ್‌ಗಿಂತಲೂ ನೆಲದ ಮೇಲೆ ನಡೆಯುವುದು ಉತ್ತಮ.

ನಡಿಗೆಯ ಪ್ರಯೋಜನಗಳೇನು?

ವಾಕಿಂಗ್‌ ಮಾಡಲು ಹೊರಗೆ ಅಥವಾ ಉದ್ಯಾನವನಕ್ಕೆ ಹೋಗಬೇಕು. ಸಮತಟ್ಟಾದ ಮಾರ್ಗದ ಬದಲು ಉಬ್ಬು ತಗ್ಗಿನ ರಸ್ತೆಯನ್ನು ಆಯ್ದುಕೊಳ್ಳಿ. ಅಷ್ಟೇ ಅಲ್ಲ ಹೊರಗೆ ನಡೆಯುವ ಮೂಲಕ ನೀವು ನೇರವಾಗಿ ಪ್ರಕೃತಿಯ ಸಂಪರ್ಕಕ್ಕೆ ಬರುತ್ತೀರಿ. ದೇಹದ ಪ್ರತಿಯೊಂದು ಭಾಗವೂ ಚಲಿಸುತ್ತಲೇ ಇರುತ್ತದೆ.ಪಾದದ ಹೆಜ್ಜೆ ಮತ್ತು ಸ್ಥಾನವು ವಿಭಿನ್ನವಾಗಿರುತ್ತದೆ. ಇದರಿಂದಾಗಿ ದೇಹಕ್ಕೆ ಚೆನ್ನಾಗಿ ವ್ಯಾಯಾಮವಾಗುತ್ತದೆ. ಇಡೀ ದೇಹದ ಸ್ನಾಯುಗಳು ನಡಿಗೆಯಲ್ಲಿ ಭಾಗವಹಿಸುತ್ತವೆ. ಆದರೆ ಇದು ಟ್ರೆಡ್ ಮಿಲ್‌ನಲ್ಲಿ ಸಂಭವಿಸುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...