ಗೋಡಂಬಿಯಲ್ಲಿ ಮಾಡಿದ ತಿನಿಸುಗಳು ಯಾರಿಗೆ ತಾನೇ ಇಷ್ಟವಾಗೋದಿಲ್ಲ ಹೇಳಿ? ಚಿಕನ್ ಅಥವಾ ಪನೀರ್ ಖಾದ್ಯಗಳಿಗೆ ಗೋಡಂಬಿ ಹಾಕಿದರಂತೂ ಅದರ ರುಚಿ ಇನ್ನಷ್ಟು ಹೆಚ್ಚು.
ಇಂಥ ಗೋಡಂಬಿಯನ್ನು ಬೆಳೆದು, ಫಸಲು ತೆಗೆದು, ಅವುಗಳಿಂದ ಗೇರು ಬೀಜ ಪ್ರತ್ಯೇಕಿಸಿ, ಸಂಸ್ಕರಿಸಿ, ಗಾತ್ರಕ್ಕನುಗುಣವಾಗಿ ವಿಂಗಡಿಸಿ, ಪ್ಯಾಕೇಜಿಂಗ್ ಮಾಡುವವರೆಗಿನ ವಿವಿಧ ಹಂತಗಳನ್ನು ಕಟ್ಟಿಕೊಟ್ಟಿರುವ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ಅಸ್ಸಾಂನ ಗೇರು ಸಂಸ್ಕರಣಾ ಘಟಕವೊಂದರಲ್ಲಿ ಈ ವಿಡಿಯೋವನ್ನು ಫುಡ್ ವ್ಲಾಗರ್ ಸಲೋನಿ ಬೋತ್ರಾ ರೆಕಾರ್ಡ್ ಮಾಡಿ ನೆಟ್ಟಿಗರೊಂದಿಗೆ ಶೇರ್ ಮಾಡಿದ್ದಾರೆ.