ಆಗಾಗ ವಿವಾದಕ್ಕೆ ಕಾರಣವಾಗುವ ಸ್ಟ್ರೀಮಿಂಗ್ ಶೋ ಗಂಡಿ ಬಾತ್, ಈ ಬಾರಿ ಒಂದು ಸಮುದಾಯದ ಧಾರ್ಮಿಕ ಭಾವನೆಗಳನ್ನು ನೋಯಿಸಿದ ಆರೋಪದ ಮೇಲೆ ಮತ್ತೆ ವಿವಾದಕ್ಕೆ ಸಿಲುಕಿದೆ. ಈ ಮೂಲಕ ಹಿಂದಿ ಕಿರುತೆರೆ ಖ್ಯಾತ ನಿರ್ದೇಶಕಿ ಏಕ್ತಾ ಕಪೂರ್ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ವಯಸ್ಕರ ಹಾಸ್ಯ ವೆಬ್-ಸರಣಿಯಾದ ಈ ಕಾರ್ಯಕ್ರಮದ ಪೋಸ್ಟರ್ ನಲ್ಲಿ ಲಕ್ಷ್ಮಿ ದೇವಿಗೆ ಹೋಲಿಕೆಗಳಿವೆ ಎಂದು ಆರೋಪಿಸಿ ಟೀಕೆಗೆ ಗುರಿಯಾಗಿದೆ. ಪೋಸ್ಟರ್ ನಲ್ಲಿ, ಭಾರತೀಯ ಉಡುಪನ್ನು ಧರಿಸಿದ ಮಹಿಳೆಯೊಬ್ಬರು ಕಮಲದ ಹೂವಿನ ಪಕ್ಕದಲ್ಲಿ ಪೋಸ್ ನೀಡುತ್ತಿರುವುದನ್ನು ಕಾಣಬಹುದು. ಪೋಸ್ಟರ್ ಬದಿಗಳಲ್ಲಿ ಎರಡು ನವಿಲುಗಳನ್ನು ಸಹ ಹೊಂದಿದೆ.
ಈ ಮೂಲಕ ಲಕ್ಷ್ಮಿ ದೇವಿಯನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಕಾಮ ಪ್ರಚೋದಕ ಕಥೆಯನ್ನು ಒಳಗೊಂಡ ವೆಬ್ ಸರಣಿಯಾಗಿದ್ದರಿಂದ ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.