HomeKarnatakaBIG NEWS: ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ; ಟಾಪರ್ ಗಳ ಬಗ್ಗೆ ಇಲ್ಲಿದೆ ಮಾಹಿತಿ

BIG NEWS: ಸಿಇಟಿ ಪರೀಕ್ಷಾ ಫಲಿತಾಂಶ ಪ್ರಕಟ; ಟಾಪರ್ ಗಳ ಬಗ್ಗೆ ಇಲ್ಲಿದೆ ಮಾಹಿತಿ

2023-24ನೇ ಸಾಲಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.

ಬೆಂಗಳೂರಿನ ಮಲ್ಲೇಶ್ವರಂ ಕೆಇಎ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದಾರೆ. ಸಿಇಟಿಯಲ್ಲಿಯೂ ಈ ಬಾರಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಮೇ 20ರಿಂದ 22ರವರೆಗೆ ರಾಜ್ಯದ 592 ಪರೀಕ್ಷಾ ಕೇಂದ್ರಗಳಲ್ಲಿ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆ ನಡೆದಿತ್ತು. ಇಂದು ಫಲಿತಾಂಶ ಪ್ರಕಟವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಜಿನಿಯರಿಂಗ್, ಕೃಷಿ-ವಿಜ್ಞಾನ, ಪಶುಸಂಗೋಪನೆ, ಯೋಗ ಮತ್ತು ನ್ಯಾಚುರೋಪತಿ, ಬಿಫಾರ್ಮ್ ಮತ್ತು ಡಿ ಫಾರ್ಮ್, ಬಿಎಸ್ ಸಿ ನರ್ಸಿಂಗ್ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆ ನಡೆದಿತ್ತು.

ಇಂಜಿನಿಯರಿಂಗ್ ವಿಭಾದಲ್ಲಿ

ವಿಘ್ನೇಶ್ ಪ್ರಥಮ, ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ, ಸಮೃದ್ಧ ಶೆಟ್ಟಿ ತೃತೀಯ, ಎಸ್.ಸುಮೇಧ್ 4ನೇ ಹಾಗೂ ಮಾಧವ ಸೂರ್ಯ 5ನೇ ಸ್ಥಾನ ಪಡೆದಿದ್ದಾರೆ.

ನ್ಯಾಚುರೋಪತಿ ಹಾಗೂ ಯೋಗಾ ವಿಭಾಗದಲ್ಲಿ

ಪ್ರತೀಕ್ಷಾ ಮೊದಲ ಸ್ಥಾನ- ಬೆಂಗಳೂರಿನ ಪದ್ಮನಾಭನಗರ ಕುಮಾರನ್ ಪಿಯು ಕಾಲೇಜು ವಿದ್ಯಾರ್ಥಿನಿ

ಕೃಷಿ ವಿಭಾಗದಲ್ಲಿ ಭೈರೇಶ್ ಎಸ್.ಹೆಚ್- ಮಂಗಳೂರಿನ ಎಕ್ಸ್ ಪರ್ಟ್ ಯುನಿವರ್ಸಿಟಿ ಕಾಲೇಜು ವಿದ್ಯಾರ್ಥಿ

ವೆಟನರಿ ಸೈನ್ಸ್ ವಿಭಾಗ ದಲ್ಲಿ ಮಾಳವಿಕ ಕಾಪೂರ್ ಮೊದಲ ರ್ಯಾಂಕ್ – ಚಾಮರಾಜಪೇಟೆಯ ಮಹೇಶ್ ಕಾಲೇಜು ವಿದ್ಯಾರ್ಥಿನಿ

ಬಿ ಫಾರ್ಮ್ ವಿಭಾಗದಲ್ಲಿ ಪ್ರತೀಕ್ಷಾ ಆರ್ ಮೊದಲ ರ್ಯಾಂಕ್ – ಬೆಂಗಳೂರಿನ ಶ್ರೀ ಕುಮಾರನ್ ಚಿಲ್ಡ್ರನ್ಸ್ ಹೋಮ್ ಕಾಂಪೋಸಿಟ್ ಪ್ರಿ-ಯುನಿವರ್ಸಿಟಿ ಕಾಲೇಜು ವಿದ್ಯಾರ್ಥಿನಿ

ಬೆಳಿಗ್ಗೆ 11 ಗಂಟೆಯಿಂದ kea.jar.nic.in ವೆಬ್ ಸೈಟ್ ನಲ್ಲಿ ಫಲಿತಾಂಶ ಲಭ್ಯವಿದೆ.

For Latest News Updates, Join Our Whatsapp Community🚩
RELATED ARTICLES

Most Popular