HomeKarnatakaBIG NEWS: ಸುರ್ಜೇವಾಲಾಗೂ ಬಿಬಿಎಂಪಿ ಸಭೆಗೂ ಸಂಬಂಧವಿಲ್ಲ; ನಿನ್ನೆ ಯಾವ ಮೀಟಿಂಗೂ ನಡೆಸಿಲ್ಲ ಎಂದ ಡಿಸಿಎಂ

BIG NEWS: ಸುರ್ಜೇವಾಲಾಗೂ ಬಿಬಿಎಂಪಿ ಸಭೆಗೂ ಸಂಬಂಧವಿಲ್ಲ; ನಿನ್ನೆ ಯಾವ ಮೀಟಿಂಗೂ ನಡೆಸಿಲ್ಲ ಎಂದ ಡಿಸಿಎಂ

ಬೆಂಗಳೂರು: ಬಿಜೆಪಿ ನಾಯಕರು ಯಾರಿಗೆ ಬೇಕಾದರೂ ದೂರು ನೀಡಲಿ. ನಾವು ನಿನ್ನೆ ಯಾವುದೇ ಮೀಟಿಂಗ್ ಮಾಡಿಯೇ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಅಧಿಕಾರಿಗಳ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಭಾಗಿ ವಿಚಾರವಾಗಿ ಪಾವಗಡದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಿನ್ನೆ ನಾವು ಯಾವುದೇ ಸಭೆಯನ್ನೇ ನಡೆಸಿಲ್ಲ. ಸುರ್ಜೇವಾಲಾಗೂ ಬಿಬಿಎಂಪಿ ಸಭೆಗೂ ಯಾವುದೇ ಸಂಬಂಧವಿಲ್ಲ, ನಾನೂ ಕೂಡ ಯಾವುದೇ ಸಭೆ ನಡೆಸಿಲ್ಲ ಎಂದು ಹೇಳಿದರು.

ನಿನ್ನೆ ನಾನು ಬೆಂಗಳೂರು ಸಿಟಿ ರೌಂಡ್ಸ್ ಹೋಗಿದ್ದೆ. ನನ್ನನ್ನು ಕರೆದೊಯ್ಯಲು ಅಧಿಕಾರಿಗಳು ಬಂದಿದ್ದರು. ನಿನ್ನೆ ಯಾವುದೇ ಅಧಿಕೃತವಾದ ಸಭೆಯನ್ನು ನಡೆಸಿಲ್ಲ. ಬಿಜೆಪಿಯವರು ರಾಜ್ಯಪಾಲರಿಗೆ ದೂರು ನೀಡುವುದಾದರೆ ನೀಡಲಿ. ನಿನ್ನೆ ಯಾವ ಸಭೆ, ಮೀಟಿಂಗೂ ಮಾಡಿಲ್ಲ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular