HomeCrimeBIG NEWS: ಜೆಸಿಬಿ ಹರಿದು ಮೂವರು ಸ್ಥಳದಲ್ಲೇ ದುರ್ಮರಣ

BIG NEWS: ಜೆಸಿಬಿ ಹರಿದು ಮೂವರು ಸ್ಥಳದಲ್ಲೇ ದುರ್ಮರಣ

ಬೆಂಗಳೂರು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ದುರಂತವೊಂದು ಸಂಭವಿಸಿದ್ದು, ಜೆಸಿಬಿ ಹರಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ನೀಲವಂಜಿ ಗ್ರಾಮದಲ್ಲಿ ನಡೆದಿದೆ.

ಮೃತರು ಛತ್ತೀಸ್ ಗಢ ಮೂಲದವರಾಗಿದ್ದಾರೆ. ವಿಷ್ಣು (26), ಶಿವರಾಮ್ (28) ಬಲರಾಮ್ (30) ಮೃತರು. ಜಮೀನಿನಲ್ಲಿ ಬೋರ್ವೆಲ್ ಕೊರೆದು ಕಾಲುದಾರಿಯಲ್ಲಿ ಮೂವರು ಮಲಗಿದ್ದರು. ರಾತ್ರಿ ವೇಳೆ ಕಾಲುದಾರಿಯಲ್ಲಿ ಬಂದ ಜೆಸಿಬಿ ಮೂವರ ಮೇಲೆ ಹರಿದಿದೆ.

ನಿಲವಂಜಿ ಗ್ರಾಮದ ನಿವಾಸಿ ಬಾಲಯ್ಯ ಎಂಬುವವರಿಗೆ ಸೇರಿದ ಜೆಸಿಬಿ ಇದಾಗಿದೆ. ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular