ಚಿನ್ನದ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಕಳೆದ 15 ತಿಂಗಳಲ್ಲಿ ಚಿನ್ನದ ದರ ಸುಮಾರು 11,000 ರೂಪಾಯಿಯಷ್ಟು ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕೂಡ ಚಿನ್ನ ಕೊಂಚ ಏರುಮುಖ ಮಾಡಿರೋದ್ರಿಂದ ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಕಂಡುಬರುತ್ತಿದೆ. ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 60,680 ರೂಪಾಯಿ ಆಗಿದೆ.
ಮಂಗಳವಾರ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 30 ರೂಪಾಯಿ ಏರಿಕೆ ಕಂಡಿತು. ಕಳೆದ ವಹಿವಾಟಿನಲ್ಲಿ ಚಿನ್ನದ ದರ 10 ಗ್ರಾಂಗೆ 60,650 ರೂಪಾಯಿ ಇತ್ತು. ಇದಲ್ಲದೇ ಬೆಳ್ಳಿಯ ಬೆಲೆಯೂ 70 ರೂಪಾಯಿ ಏರಿಕೆಯಾಗಿ ಪ್ರತಿ ಕೆಜಿಗೆ 74,120 ರೂಪಾಯಿಗಳಿಗೆ ತಲುಪಿದೆ.ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಔನ್ಸ್‌ಗೆ 1,964 ಡಾಲರ್‌ಗೆ ಏರಿಕೆಯಾಗಿದೆ. ಬೆಳ್ಳಿ ಕೂಡ ಪ್ರತಿ ಔನ್ಸ್‌ಗೆ 24.19 ಡಾಲರ್‌ಗೆ ಏರಿಕೆ ಕಂಡಿದೆ.
ಜಾಗತಿಕ ಮಾರುಕಟ್ಟೆ ಕುಸಿತ
ಮಂಗಳವಾರ ಏಷ್ಯನ್ ವಹಿವಾಟಿನ ವೇಳೆಯಲ್ಲಿ ಅಮೆರಿಕನ್ ಡಾಲರ್ ಸೂಚ್ಯಂಕವು ಶೇ.0.30ಯಷ್ಟು ಕಡಿಮೆಯಾಗಿ 102.80 ಕ್ಕೆ ವಹಿವಾಟು ನಡೆಸುತ್ತಿದೆ. ಇದು ಅಮೂಲ್ಯವಾದ ಲೋಹಗಳಿಗೆ ಬೆಂಬಲವನ್ನು ನೀಡುತ್ತದೆ.