ಬೆಂಗಳೂರು: ಹೆಲ್ಪ್ ಲೈನ್ ಹೆಸರಲ್ಲಿ ಒಬ್ಬರಿಗೆ ಮಾಸಿಕ 4 ಲಕ್ಷ ರೂಪಾಯಿ ವೇತನ ಪಾವತಿ ಮಾಡಲಾಗಿದ್ದು, ಸಚಿವ ಜಮೀರ್ ಅಹ್ಮದ್ ಖಾನ್ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಅಲ್ಪಸಂಖ್ಯಾತರ ಇಲಾಖೆಯ ಯೋಜನೆ ಬಗ್ಗೆ ಮಾಹಿತಿ ನೀಡಲು ಹೆಲ್ಪ್ ಲೈನ್ ಆರಂಭಿಸಲಾಗಿದ್ದು, ಹೆಲ್ಪ್ ಲೈನ್ ನಿರ್ವಹಣೆ ಮಾಡಿದ ಒಬ್ಬರಿಗೆ 4 ಲಕ್ಷ ರೂಪಾಯಿ ವೇತನ ಪಾವತಿಸಲಾಗಿದೆ. ಹೆಲ್ಪ್ ಲೈನ್ ನಿಂದ ಪ್ರಯೋಜನವಾಗದಿದ್ದರೂ ಅದನ್ನು ಮುಂದುವರೆಸಿದ್ದರ ಬಗ್ಗೆ ತನಿಖೆ ಆದೇಶಿಸಲಾಗಿದೆ.
ಮುಖ್ಯ ಕಾರ್ಯದರ್ಶಿಗಿಂತ ಮೂರು ಪಟ್ಟು ವೇತನ ಒಬ್ಬರಿಗೆ ಪಾವತಿಸಿದ ಆರೋಪ ಕೇಳಿ ಬಂದಿದೆ. ಸಹಾಯವಾಣಿ ಕೇಂದ್ರಕ್ಕೆ ವಾರ್ಷಿಕ 2.5 ಕೋಟಿ ರೂ. ವೆಚ್ಚ ಮಾಡಲಾಗಿದೆ. ಆದರೆ, ಪ್ರತ್ಯೇಕವಾಗಿ ಹೆಲ್ಪ್ ಲೈನ್ ವ್ಯವಸ್ಥೆ ಮಾಡಿ ಅಕ್ರಮ ನಡೆಸಿದ ಆರೋಪ ಕೇಳಿ ಬಂದಿದ್ದು, ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ಸಚಿವ ಜಮೀರ್ ಅಹ್ಮದ್ ಖಾನ್ ಸೂಚನೆ ನೀಡಿದ್ದಾರೆ.