alex Certify ಭಾರತದ ಅತ್ಯಂತ ವಿದ್ಯಾವಂತ ವ್ಯಕ್ತಿ ಇವರು, 42 ವಿಶ್ವವಿದ್ಯಾಲಯಗಳಿಂದ ಪಡೆದಿದ್ದಾರೆ 20 ಪದವಿ… | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಅತ್ಯಂತ ವಿದ್ಯಾವಂತ ವ್ಯಕ್ತಿ ಇವರು, 42 ವಿಶ್ವವಿದ್ಯಾಲಯಗಳಿಂದ ಪಡೆದಿದ್ದಾರೆ 20 ಪದವಿ…

ಭಾರತದ ಅತ್ಯಂತ ವಿದ್ಯಾವಂತ ವ್ಯಕ್ತಿಯೊಬ್ಬರು ಸುಮಾರು 20 ಪದವಿಗಳನ್ನು ಹೊಂದಿದ್ದಾರೆ. ವಿಶೇಷ ಅಂದ್ರೆ 42 ವಿಶ್ವವಿದ್ಯಾಲಯಗಳಿಂದ ಡಿಗ್ರಿ ಪಡೆದುಕೊಂಡಿದ್ದಾರೆ. ಶ್ರೀಕಾಂತ್ ಜಿಚ್ಕರ್ ಅಧಿಕೃತವಾಗಿ ಭಾರತದ ಅತ್ಯಂತ ವಿದ್ಯಾವಂತ ಎನಿಸಿಕೊಂಡಿದ್ದಾರೆ. 25 ವರ್ಷ ವಯಸ್ಸಿನವರಾಗಿದ್ದಾಗಲೇ ಶ್ರೀಕಾಂತ್‌ 14 ಪದವಿಗಳನ್ನು ಹೊಂದಿದ್ದರು. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಅವರ ಹೆಸರು ಸೇರ್ಪಡೆಯಾಗಿದೆ.

ಎಲ್ಲಾ ಪರೀಕ್ಷೆಯನ್ನೂ ಶ್ರೀಕಾಂತ್‌ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಅನೇಕ ಚಿನ್ನದ ಪದಕಗಳನ್ನೂ ಗೆದ್ದಿದ್ದಾರೆ. 1973 ಮತ್ತು 1990ರ ನಡುವೆ ಅವರು ವಿಶ್ವವಿದ್ಯಾಲಯಗಳಲ್ಲಿ 42 ಪರೀಕ್ಷೆಗಳನ್ನು ಬರೆದಿದ್ದಾರೆ. IAS ಪರೀಕ್ಷೆಗೆ ಹಾಜರಾಗಲು IPSಗೆ ರಾಜೀನಾಮೆ ನೀಡಿದರು. ಮೊದಲ ರಾಷ್ಟ್ರೀಯ ಚುನಾವಣೆಯಲ್ಲಿ ಭಾಗವಹಿಸಲು ನಾಲ್ಕು ತಿಂಗಳ ನಂತರ ಅವರು ತಮ್ಮ ಹುದ್ದೆಯನ್ನು ತೊರೆದರು. 1980ರಲ್ಲಿ, ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾದರು.

ದೇಶದ ಅತ್ಯಂತ ಕಿರಿಯ ಸಂಸದ ಎನಿಸಿಕೊಂಡರು. ರಾಜ್ಯ ಸಚಿವರಾಗಿ, ರಾಜ್ಯಸಭಾ ಸದಸ್ಯರಾಗಿ ಮತ್ತು ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.  ಚಿತ್ರಕಲೆ, ಛಾಯಾಚಿತ್ರಗಳನ್ನು ತೆಗೆಯುವುದು ಮತ್ತು ನಾಟಕಗಳಲ್ಲಿ ನಟಿಸುವುದನ್ನು ಕೂಡ ಶ್ರೀಕಾಂತ್‌ ಇಷ್ಟಪಡುತ್ತಿದ್ದರು. ಧರ್ಮ, ಆರೋಗ್ಯ ಮತ್ತು ಶಿಕ್ಷಣದ ಕುರಿತು ಉಪನ್ಯಾಸಗಳನ್ನು ನೀಡುತ್ತಾ ದೇಶಾದ್ಯಂತ ಸಂಚರಿಸಿದ್ದಾರೆ. ಯುನೆಸ್ಕೋದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಆದರೆ ವಿಧಿಯಾಟವೇ ಬೇರೆಯಿತ್ತು. ಜೂನ್ 2, 2004 ರಂದು ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆಗ ಅವರಿಗೆ ಕೇವಲ 49 ವರ್ಷ. ಅವರ ಬಳಿ 52,000 ಪುಸ್ತಕಗಳ ಸಂಗ್ರಹವಿದೆ. ಅವರ ಕಲಿಕೆಯ ಉತ್ಸಾಹಕ್ಕೆ ಇದೇ ಸಾಕ್ಷಿ.

ಶ್ರೀಕಾಂತ್‌ ಜಿಚ್ಕರ್‌ ಪಡೆದಿರುವ ಪದವಿಗಳು….

1. ವೈದ್ಯಕೀಯ ವೈದ್ಯ, MBBS ಮತ್ತು MD

2. ಕಾನೂನು, LL.B

3. ಅಂತಾರಾಷ್ಟ್ರೀಯ ಕಾನೂನು, LL.M

4. ಬಿಸಿನೆಸ್ ಅಡ್ಮಿನಿಸ್ಟ್ರೇಷನ್, DBM ಮತ್ತು MBA ನಲ್ಲಿ ಮಾಸ್ಟರ್ಸ್

5. ಪತ್ರಿಕೋದ್ಯಮದಲ್ಲಿ ಪದವಿ

6. M.A. ಸಾರ್ವಜನಿಕ ಆಡಳಿತ

7. ಎಂ.ಎ. ಸಮಾಜಶಾಸ್ತ್ರ

8. ಎಂ.ಎ. ಅರ್ಥಶಾಸ್ತ್ರ

9. M.A. ಸಂಸ್ಕೃತ

10. M.A. ಇತಿಹಾಸ

11. M.A. ಇಂಗ್ಲೀಷ್ ಸಾಹಿತ್ಯ

12. M.A. ಫಿಲಾಸಫಿ

13. M.A. ರಾಜಕೀಯ ವಿಜ್ಞಾನ

14. M.A. ಪ್ರಾಚೀನ ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಪುರಾತತ್ವ

15. M.A. ಸೈಕಾಲಜಿ

16. ಡಿ.ಲಿಟ್. ಸಂಸ್ಕೃತ – ವಿಶ್ವವಿದ್ಯಾನಿಲಯದಲ್ಲಿ ಅತ್ಯುನ್ನತ ಪದವಿ

17. ಐಪಿಎಸ್

18. ಐಎಎಎಸ್‌

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...