ಮಹಾರಾಷ್ಟ್ರದ ಚಂಡಗಡ ತಾಲೂಕಿನ ತಿಲಾರಿ ಡ್ಯಾಮ್ ನಲ್ಲಿ ಮುಳುಗಿ ಬೆಳಗಾವಿ ಮೂಲದ ಇಬ್ಬರು ಸಹೋದರರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ರೀಹಾಲ್ ಅಲ್ತಾಫ್ (15) ಹಾಗೂ ಮುಸ್ತಫಾ ಅಲ್ತಾಫ್ ಖಾನ್ (12) ಎಂದು ಗುರುತಿಸಲಾಗಿದೆ. ಕೈ ಕಾಲು ತೊಳೆದುಕೊಳ್ಳಲು ಇಬ್ಬರು ನೀರಿಗೆ ಇಳಿದಿದ್ದು, ಈ ವೇಳೆ ಕಾಲು ಜಾರಿ ಇಬ್ಬರು ಕೂಡ ನೀರಿನಲ್ಲಿ ಮುಳುಗಿದ್ದಾರೆ. ಭಾನುವಾರ ಬೆಳಗ್ಗೆ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಈ ಸಂಬಂಧ ಚಂಡಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.