HomeKarnatakaBIG NEWS: ಪೊಲೀಸರನ್ನೇ ವಂಚಿಸಿದ್ದ ನಕಲಿ IPS ಅಧಿಕಾರಿ ಬಂಧನ

BIG NEWS: ಪೊಲೀಸರನ್ನೇ ವಂಚಿಸಿದ್ದ ನಕಲಿ IPS ಅಧಿಕಾರಿ ಬಂಧನ

ಬೆಂಗಳೂರು: ಪೊಲೀಸರನ್ನೇ ವಂಚಿಸುತ್ತಿದ್ದ ನಕಲಿ ಐಪಿಎಸ್ ಅಧಿಕಾರಿಯನ್ನು ಬೆಂಗಳೂರಿನ ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.

ಭುವನ್ ಕುಮಾರ್ ಬಂಧಿತ ಆರೋಪಿ. ವರ್ಗಾವಣೆ ದಂಧೆಯನ್ನೇ ಬಂಡವಾಳ ಮಾಡಿಕೊಂಡಿದ್ದ ಭುವನ್ ಕುಮಾರ್ ತನ್ನ ಹೆಸರು ಅರ್ಜುನ್ ತಾನು ಎಸ್ ಪಿ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾನೂ ಐಪಿಎಸ್ ಅಧಿಕಾರಿ, ತನ್ನ ಸಂಬಂಧಿಯೊಬ್ಬರು ಹಿರಿಯ ಐಪಿಎಸ್ ಅಧಿಕಾರಿಯಾಗಿದ್ದು, ತಾನು ಕೆಲವೇ ದಿನಗಳಲ್ಲಿ ಎಕ್ಸಿಕ್ಯುಟಿವ್ ಆಗಿ ಬರುತ್ತಿದ್ದೇನೆ ಎಂದು ನಂಬಿಸಿದ್ದ. ನಕಲಿ ಪೊಲೀಸ್ ಅಧಿಕಾರಿಯ ಮಾತು ನಂಬಿದ ಕೆಲ ಪೊಲೀಸರು ತಮಗೆ ಪೋಸ್ಟಿಂಗ್ ಮಾಡಿಕೊಡುವಂತೆ ಭುವನ್ ಗೆ ಹಣ ನೀಡಿದ್ದಾರೆ ಎನ್ನಲಾಗಿದೆ. ಹಣ ಪಡೆದ ಭುವನ್, ಪೋಸ್ಟಿಂಗ್ ಬಗ್ಗೆ ವಿಚಾರಿಸಿದರೆ ನೆಪಗಳನ್ನು ಹೇಳಿ ಎಸ್ಕೇಪ್ ಆಗುತ್ತಿದ್ದ. ಈ ನಡುವೆ ಸರ್ಕಾರಿ ಕೆಲಸ ಕೊಡುವುದಾಗಿ ಹೇಳಿ ವಂಚಿಸುತ್ತಿರುವ ಬಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಕಾಟನ್ ಪೇಟೆ ಪೊಲೀಸರು, ದೂರುದಾರನಿಂದಲೇ ಆರೋಪಿಗೆ ಕರೆ ಮಾಡಿಸಿ ಹಣ ಕೊಡುವುದಾಗಿ ಹೇಳಿ ಆರೋಪಿ ಕರೆಸಿದ್ದಾರೆ. ಹಣ ಪಡೆಯಲು ಬಂದ ಆರೋಪಿ ಭುವನ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

For Latest News Updates, Join Our Whatsapp Community🚩
RELATED ARTICLES

Most Popular