alex Certify ಜಾಗತಿಕ ಮಟ್ಟದ ಡಿಜಿಟಲ್ ಮೇಮೆಂಟ್ ವಹಿವಾಟಿನಲ್ಲಿ ಭಾರತಕ್ಕೆ ಅಗ್ರಸ್ಥಾನ; 2022 ರಲ್ಲಿ 89.5 ಮಿಲಿಯನ್ ಟ್ರಾನ್ಸಾಕ್ಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಗತಿಕ ಮಟ್ಟದ ಡಿಜಿಟಲ್ ಮೇಮೆಂಟ್ ವಹಿವಾಟಿನಲ್ಲಿ ಭಾರತಕ್ಕೆ ಅಗ್ರಸ್ಥಾನ; 2022 ರಲ್ಲಿ 89.5 ಮಿಲಿಯನ್ ಟ್ರಾನ್ಸಾಕ್ಷನ್

ಡಿಜಿಟಲ್ ಪೇಮೆಂಟ್ ವಹಿವಾಟಿನಲ್ಲಿ ಭಾರತವು ಟಾಪ್ ಐದು ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. MyGovIndia ದ ಅಂಕಿಅಂಶಗಳ ಪ್ರಕಾರ 2022 ರಲ್ಲಿ 89.5 ಮಿಲಿಯನ್ ಡಿಜಿಟಲ್ ವಹಿವಾಟುಗಳೊಂದಿಗೆ ಭಾರತವು ಡಿಜಿಟಲ್ ಪಾವತಿಗಳಲ್ಲಿ ಮೊದಲ ಸ್ಥಾನಪಡೆದಿದೆ.

ಡೇಟಾದ ಪ್ರಕಾರ 2022 ರಲ್ಲಿ ಭಾರತವು ಜಾಗತಿಕ ರಿಯಲ್ ಟೈಂ ಪೇಮೆಂಟ್ ಗಳಲ್ಲಿ 46 ಪ್ರತಿಶತವನ್ನು ಹೊಂದಿದೆ. ಅಂದರೆ ವಿಶ್ವದಲ್ಲಿ ನಡೆಯುತ್ತಿರುವ ರಿಯಲ್ ಟೈಂ ಪೇಮೆಂಟ್ ಗಳಲ್ಲಿ ಶೇ.46 ರಷ್ಟು ಪಾವತಿ ಭಾರತದ ಕೊಡುಗೆಯಾಗಿದೆ. ಇದು ಡಿಜಿಟಲ್ ಪಾವತಿ ವಹಿವಾಟುಗಳ ಇತರ ನಾಲ್ಕು ಪ್ರಮುಖ ದೇಶಗಳಿಗಿಂತ ಹೆಚ್ಚು. ಭಾರತದ ನಂತರದಲ್ಲಿರುವ ನಾಲ್ಕು ಪ್ರಮುಖ ರಾಷ್ಟ್ರಗಳ ಡಿಜಿಟಲ್ ಪೇಮೆಂಟ್ ಒಟ್ಟುಗೂಡಿಸಿದರೂ ಭಾರತದ ಕೊಡುಗೆಗೆ ಸಮನಾಗುವುದಿಲ್ಲ.

ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತ ತನ್ನ ಪ್ರಾಬಲ್ಯ ಸಾಧಿಸುತ್ತಿದೆ. ವಿನೂತನ ಪರಿಹಾರಗಳು ವ್ಯಾಪಕವಾದ ಅಳವಡಿಕೆಯೊಂದಿಗೆ ನಾವು ನಗದು ರಹಿತ ಆರ್ಥಿಕತೆಯತ್ತ ಮುನ್ನಡೆಯುತ್ತಿದ್ದೇವೆ. ಎಂದು MyGovIndia ಟ್ವೀಟ್ ಮಾಡಿದೆ.

ಭಾರತದ ನಂತರ ಎರಡನೆಯದಾಗಿ ಪಟ್ಟಿಯಲ್ಲಿ ಬ್ರೆಜಿಲ್ 29.2 ಮಿಲಿಯನ್ ವಹಿವಾಟುಗಳನ್ನು ಹೊಂದಿದೆ, ನಂತರ ಚೀನಾ 17.6 ಮಿಲಿಯನ್ ವಹಿವಾಟುಗಳನ್ನು ಹೊಂದಿದೆ. 4 ನೇ ಸ್ಥಾನದಲ್ಲಿ ಥೈಲ್ಯಾಂಡ್ 16.5 ಮಿಲಿಯನ್ ಡಿಜಿಟಲ್ ವಹಿವಾಟುಗಳನ್ನು ಹೊಂದಿದೆ ಮತ್ತು ದಕ್ಷಿಣ ಕೊರಿಯಾ 8 ಮಿಲಿಯನ್ ಮೌಲ್ಯದ ವಹಿವಾಟುಗಳನ್ನು ಹೊಂದಿದೆ ಎಂದು MyGovIndia ದ ಡೇಟಾ ತಿಳಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...