ಬೆಂಗಳೂರು: ದೇಶಕ್ಕೆ ಪ್ರಜ್ಞಾವಂತರ ಅಗತ್ಯವಿದೆ. ಪೆನ್ನು ಪೇಪರ್ ಕೈಯಲ್ಲಿದ್ದಾಗ ಅದನ್ನು ಹೇಗೆ ಬಳಸಬೇಕೋ ಹಾಗೇ ಬಳಸಬೇಕು. ಅಧಿಕಾರ ಇದ್ದಾಗ ಜನರ ಒಳಿತಿಗಾಗಿ ಕೆಲಸ ಮಾಡಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಾಜಿ ಆರೋಗ್ಯ ಸಚಿವ ಡಾ.ಸುಧಾಕರ್ ವಿರುದ್ಧ ಕಿಡಿ ಕಾರಿದ ಡಿ.ಕೆ.ಶಿವಕುಮಾರ್, ಹಿಂದಿನ ಸರ್ಕಾರದಲ್ಲಿ ಸುಧಾಕರ್ ಆರೋಗ್ಯ ಸಚಿವರಾಗಿ ಕನಕಪುರಕ್ಕೆ ಬಂದಿದ್ದರು. ಕ್ಷೇತ್ರದಲ್ಲಿ ಇದ್ದ ಆಸ್ಪತ್ರೆಯನ್ನೂ ತೆಗೆದುಕೊಂಡು ಹೋದರು. ಅದಕ್ಕೆ ಹೇಳುವುದು ಅಧಿಕಾರ ಇದ್ದಾಗ ಪೆನ್ನು ಜನರ ಒಳಿತಿಗಾಗಿ ಬಳಸಬೇಕು ಎಂದು ಟಾಂಗ್ ನೀಡಿದರು.
ಒಳ್ಳೆಯದನ್ನು ಮಾಡಬೇಕು ಎಂದಿದ್ದರೆ ಇಂದೇ ಮಾಡಿ. ಅದಕ್ಕೆ ನಾಳೆ ಬೆಳಿಗ್ಗೆಗಾಗಿ ಕಾಯಬೇಕಿಲ್ಲ, ನಾಳೆ ಬಗ್ಗೆ ಯೋಚಿಸಬಾರದು ಎಂದು ಹೇಳಿದರು.