ಬೆಂಗಳೂರು: ನಾಳೆಯಿಂದ ಸರ್ಕಾರಿ ಬಸ್ ಗಳಲ್ಲಿ ರಾಜ್ಯದ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ವಿಧಾನಸೌಧದಲ್ಲಿ ನಾಳೆ ಮಧ್ಯಾಹ್ನ 1 ಗಂಟೆಗೆ ಶಕ್ತಿ ಯೋಜನೆ ಮಹಿಳೆಯರ ಉಚಿತ ಪ್ರಯಾಣಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಲಿದೆ.
ಮಹಿಳೆಯರಿಗೆ ನೀಡುವ ೦ ದರದ ಪಿಂಕ್ ಟಿಕೆಟ್ ನ್ನು ಸಿಎಂ ಸಿದ್ದರಾಮಯ್ಯ ಮಹಿಳಾ ಪ್ರಯಾಣಿಕರಿಗೆ ನೀಡಲಿದ್ದಾರೆ. ಇದೇ ವೇಳೆ ಸಾಂಕೇತಿಕವಾಗಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲಿದ್ದಾರೆ. ಸೇವಾ ಸಿಂಧು ಆಪ್ ಮೂಲಕ ಅರ್ಜಿ ಸಲ್ಲಿಸಿ ಮಹಿಳೆಯರು ಸ್ಮಾರ್ಟ್ ಕಾರ್ಡ್ ಪಡೆಯಬೇಕು. ಸ್ಮಾರ್ಟ್ ಕಾರ್ಡ್ ಪಡೆಯುವರಗೆ ಉಚಿತ ಬಸ್ ಪ್ರಯಾಣಕ್ಕೆ ಮಹಿಳೆಯರು ಕೆಲ ದಾಖಲೆಗಳನ್ನು ತೋರಿಸಬೇಕು.
ಮಹಿಳೆಯರು ತೋರಿಸಬೇಕಾದ ದಾಖಲೆಗಳು:
ಆಧಾರ್ ಕಾರ್ಡ್
ವೋಟರ್ ಐಡಿ
ಡ್ರೈವಿಂಗ್ ಲೈಸೆನ್ಸ್
ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ನೀಡುವ ವಾಸಸ್ಥಳದ ಗುರುತಿನ ಚೀಟಿ – ಇವುಗಳಲ್ಲಿ ಯಾವುದಾದರೂ ಒಂದು ದಾಖಲೆ ತೋರಿಸಿ ಉಚಿತವಾಗಿ ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಬಹುದಾಗಿದೆ.