
ಚಿಕ್ಕಮಗಳೂರು: ಓಡಿಶಾ ರೈಲು ದುರಂತದಲ್ಲಿ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಕಳಸದ ಧರ್ಮಪಾಲಯ್ಯ ಎಂಬುವವರು ಪರಾಗಿ ಬಂದಿದ್ದರು. ಅಪಘಾತದಲ್ಲಿ ಬದುಕುಳಿದು ಬಂದಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರಿನ ಕಳಸದ 110 ಜನರು ಜಾರ್ಖಂಡ್ ನ ಜೈನ ಯಾತ್ರಾಸ್ಥಳ ಸಮೇದ್ ಶಿಖರ್ಜಿಗೆ ತೆರಳಿದ್ದರು. ಅವರು ತೆರಳಿದ್ದ ರೈಲು ಸೇರಿದಂತೆ ಒಟ್ಟು ಮೂರು ರೈಲುಗಳು ಓಡಿಶಾದಲ್ಲಿ ಜೂನ್ 2ರಂದು ಭೀಕರ ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಪಾರಾಗಿ ಬದುಕುಳಿದಿದ್ದ ಧರ್ಮಪಾಲಯ್ಯ(61) ಸುಮೇದ್ ಶಿಖರ್ಜಿಗೆ ತೆರಳಿದ್ದರು. ಅಲ್ಲಿಂದ ಹಿಂದಿರುಗುವಾಗ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಉತ್ತರಪ್ರದೇಶದ ಮಿರ್ಜಾಪುರ ರೈಲು ನಿಲ್ದಾಣದಲ್ಲಿ ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಮಿರ್ಜಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಯಾತ್ರಿಕರು ಧರ್ಮಪಾಲಯ್ಯ ಮೃತದೇಹಕ್ಕಾಗಿ ಕಾಯುತ್ತಿದ್ದಾರೆ .