ಗದಗ : ಗದಗದಲ್ಲಿ (Gadaga) ಘೋರ ದುರಂತವೊಂದು ಸಂಭವಿಸಿದ್ದು, ಗಾಳಿಪಟದ ದಾರ (Kite string)ಕ್ಕೆ ಸಿಲುಕಿ ಕತ್ತು ಸೀಳಿದ್ದ ಯುವಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಳೆದ ಭಾನುವಾರ ಕಾರಹುಣ್ಣಿಮೆಯಂದು ಬೈಕ್ ನಲ್ಲಿ ಹೋಗುವಾಗ ಗದಗದಲ್ಲಿ ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ ಯುವಕನ ಕತ್ತು ಸೀಳಿತ್ತು. ಬಳಿಕ ಕೂಡಲೇ ಯುವಕನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ 5 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ.
ಮೃತ ಯುವಕ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ನಿವಾಸಿ ಪಿ.ರವಿಯಾಗಿದ್ದು, ಕಳೆದ ಭಾನುವಾರ ಬೈಕ್ ನಲ್ಲಿ ಹೋಗುವಾಗ ಗಾಳಿಪಟದ ಮಾಂಜಾ ದಾರಕ್ಕೆ ಸಿಲುಕಿ ಕತ್ತು ಸೀಳಿದ ಪರಿಣಾಮ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.