HomeKarnatakaBIG NEWS: 224 ಶಾಸಕರಿಗೂ ಲೋಕಾಯುಕ್ತ ಡೆಡ್ ಲೈನ್; ಆಸ್ತಿ ವಿವರ ಸಲ್ಲಿಸುವಂತೆ ಖಡಕ್ ಸೂಚನೆ

BIG NEWS: 224 ಶಾಸಕರಿಗೂ ಲೋಕಾಯುಕ್ತ ಡೆಡ್ ಲೈನ್; ಆಸ್ತಿ ವಿವರ ಸಲ್ಲಿಸುವಂತೆ ಖಡಕ್ ಸೂಚನೆ

ಬೆಂಗಳೂರು: ಎಲ್ಲಾ 224 ಶಾಸಕರು ಈ ತಿಂಗಳಾಂತ್ಯದೊಳಗೆ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿಗಳು ಡೆಡ್ ಲೈನ್ ನೀಡಿದ್ದಾರೆ.

ಜೂನ್ 30ರೊಳಗೆ ಎಲ್ಲಾ ಶಾಸಕರು ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸುವಂತೆ ಸರ್ಕಾರದ ಸಿಎಸ್ ಗೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಸೂಚನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದೇಶ ನೀಡಿ 15 ದಿನಗಳು ಕಳೆದರೂ ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. ಕಳೆದ ಬಾರಿ ಆಸ್ತಿವಿವರ ಸಲ್ಲಿಸಲಾಗಿದೆ ಎಂದು ಸುಮ್ಮನಿರುವಂತಿಲ್ಲ. ಪುನರಾಯ್ಕೆಯಾದ ಶಾಸಕರು ಹಾಗೂ ಹೊಸದಾಗಿ ಶಾಸಕರಾದವರು ಮತ್ತೊಮ್ಮೆ ಆಸ್ತಿ ವಿವರ ಸಲ್ಲಿಸಬೇಕು. ಜೂನ್ 30ರೊಳಗೆ ಶಾಸಕರು ತಮ್ಮ ಆಸ್ತಿ ವಿವರ ಸಲ್ಲಿಸದಿದ್ದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular