HomeIndiaವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ: ಅವಧಿಗೂ ಮೊದಲೇ ಪದವಿ ಪಡೆಯಲು ಅವಕಾಶ

ವಿದ್ಯಾರ್ಥಿಗಳಿಗೆ ಭರ್ಜರಿ ಸುದ್ದಿ: ಅವಧಿಗೂ ಮೊದಲೇ ಪದವಿ ಪಡೆಯಲು ಅವಕಾಶ

ನವದೆಹಲಿ: ಕೋರ್ಸ್ ಅವಧಿ ಎಷ್ಟೇ ಇದ್ದರೂ ಕೂಡ ವಿದ್ಯಾರ್ಥಿಗಳು ಅಗತ್ಯವಾದ ಕ್ರೆಡಿಟ್(ಅಂಕ) ಪಡೆದಿದ್ದರೆ ಕೋರ್ಸ್ ಅವಧಿಯನ್ನು ಪರಿಗಣಿಸದೇ ಸಂಬಂಧಿಸಿದ ಪದವಿ ನೀಡಲು ಯುಜಿಸಿ ಸಮಿತಿ ಶಿಫಾರಸು ಮಾಡಿದೆ.

ಪದವಿ ಡಿಪ್ಲೋಮಾ ಅಥವಾ ಸರ್ಟಿಫಿಕೇಟ್ ಕೋರ್ಸ್ ಪಡೆದುಕೊಳ್ಳಲು ವಿದ್ಯಾರ್ಥಿಗಳು ಪಡೆದ ಅಗತ್ಯವಾದ ಅಂಕಗಳನ್ನು ಅರ್ಹತೆಗೆ ಪರಿಗಣಿಸಬಹುದು ಎಂದು ಹೇಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎನ್‌ಇಪಿ 2020ಕ್ಕೆ ಪೂರಕವಾಗಿ ಉನ್ನತ ಶಿಕ್ಷಣದಲ್ಲಿ ಮಲ್ಟಿಪಲ್ ಎಂಟ್ರಿ ಮತ್ತು ಎಕ್ಸಿಟ್ ಗೆ ಅವಕಾಶ ಒದಗಿಸಲು ಯುಜಿಸಿಯ ಸಮಿತಿ ಶಿಫಾರಸು ಮಾಡಿದ್ದು, ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಪದವಿ ನಿಯಮಗಳನ್ನು ನವೀಕರಿಸುವಂತೆ ಸಲಹೆ ನೀಡಲಾಗಿದೆ.

ಅಂತೆಯೇ ಕೋರ್ಸ್ ಅವಧಿ ಎಷ್ಟೇ ಇದ್ದರೂ ಕೂಡ ವಿದ್ಯಾರ್ಥಿಗಳು ಅಗತ್ಯವಾದ ಕ್ರೆಡಿಟ್ ಗಳಿಸಿದಾಗ ಅವರನ್ನು ಪದವಿ, ಡಿಪ್ಲೋಮಾ ಅಥವಾ ಸರ್ಟಿಫಿಕೇಟ್ ಪಡೆಯಲು ಅರ್ಹತೆಗೆ ಪರಿಶೀಲಿಸಬಹುದು. ಪದವಿ ಕೋರ್ಸ್ ಗಳ ಕನಿಷ್ಠ ಅವಧಿಯ ಹೊರತಾಗಿಯೂ ಕ್ರೆಡಿಟ್ ಗಳ ಆಧಾರದಲ್ಲಿ ಪದವಿಗೆ ಪರಿಗಣಿಸಬಹುದು ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular