HomeEntertainmentನಟ ಕಿಶೋರ್ ಆಪ್ತ ಗೆಳೆಯ, ‘ಕಬಡ್ಡಿ’ ಚಿತ್ರದ ನಿರ್ಮಾಪಕ ಅನೂಪ್ ಗೌಡ ಇನ್ನಿಲ್ಲ

ನಟ ಕಿಶೋರ್ ಆಪ್ತ ಗೆಳೆಯ, ‘ಕಬಡ್ಡಿ’ ಚಿತ್ರದ ನಿರ್ಮಾಪಕ ಅನೂಪ್ ಗೌಡ ಇನ್ನಿಲ್ಲ

ಸ್ಯಾಂಡಲ್ ವುಡ್ ಖ್ಯಾತ ನಟ ಕಿಶೋರ್ ಆಪ್ತ ಗೆಳೆಯ ಹಾಗೂ ಕಬಡ್ಡಿ ಸಿನಿಮಾದ ನಿರ್ಮಾಪಕ ಅನೂಪ್ ಗೌಡ
(Anoop Gowda) ಮೃತಪಟ್ಟಿದ್ದಾರೆ. ಈ ಕುರಿತು ನಟ ಕಿಶೋರ್ ಸೋಶಿಯಲ್ ಮೀಡಿಯಾದಲ್ಲಿ ಈ ಕಹಿ ವಿಚಾರ ಹಂಚಿಕೊಂಡಿದ್ದಾರೆ.
2009 ರಲ್ಲಿ ತೆರೆಕಂಡಿದ್ದ ಕಬಡ್ಡಿ ಸಿನಿಮಾವನ್ನು ಅನೂಪ್ ಗೌಡ ನಿರ್ಮಿಸಿದ್ದರು. ಇದೀಗ ಅಗಲಿದ ಗೆಳೆಯನನ್ನು ನೆನೆದು ಕಿಶೋರ್ ಕಂಬನಿ ಮಿಡಿದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ (On social media) ಕಿಶೋರ್ ಪೋಸ್ಟ್ ಹಂಚಿಕೊಂಡಿದ್ದಾರೆ.

‘ನಮ್ಮ ನಿರ್ಮಾಣದ ಮೊದಲ ಪ್ರಯತ್ನ, ‘ಕಬಡ್ಡಿ’ ಸಿನಿಮಾ ಬೇಡದ ಕಲಹಗಳಲ್ಲಿ ನಿಂತು ಹೋದ ಸಮಯದಲ್ಲಿ ಬೇಡ ಬೇಡವೆಂದರೂ ಎಲ್ಲರನ್ನೂ ಎದುರು ಹಾಕಿಕೊಂಡು ಎಲ್ಲರನ್ನೂ ದೂರ ಮಾಡಿಕೊಂಡು ಹಠ ಹಿಡಿದು ಸಿನಿಮಾ ಮುಗಿಸಿ , ಹಸಿರು ನೆನಪುಗಳನ್ನು ಬಳಿಯುಳಿಸಿ ದೂರ ದೂರ ಹೋಗುತ್ತಲೇ ದೂರದಲ್ಲೆಲ್ಲೊ ಅಸ್ತಂಗತನಾಗಿ ಹೋದ ಪುಟ್ಟ ಗೆಳೆಯ ಅನೂಪನಿಗೆ ದೂರದಿಂದಲೇ ಭಾಷ್ಪಾಂಜಲಿ’ ಎಂದು ನಟ ಕಿಶೋರ್ (Actor Kishore)
ಪೋಸ್ಟ್ ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular