ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತಕ್ಕೂ ಮೊದಲಿನ ಕ್ಷಣಗಳ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
ಜೂನ್ 2 ರ ಸಂಜೆ ಅಪಘಾತಕ್ಕೀಡಾದ ದುರದೃಷ್ಟಕರ ಎಕ್ಸ್ ಪ್ರೆಸ್ ರೈಲಿನ ಎಸಿ ಕಂಪಾರ್ಟ್ಮೆಂಟ್ ಒಂದರ ವೀಡಿಯೊ ಎಂದು ಹೇಳಲಾಗಿದೆ. ವೀಡಿಯೊವನ್ನು ಕೋಚ್‌ನೊಳಗಿದ್ದ ಯಾರೋ ಚಿತ್ರೀಕರಿಸಿದ್ದಾರೆ. ವಿಡಿಯೋ ರೆಕಾರ್ಡಿಂಗ್ ವೇಳೆ ರೈಲು ಹಳಿ ತಪ್ಪಿ ದುರಂತ ಸಂಭವಿಸಿರುವ ಆಘಾತಕಾರಿ ದೃಶ್ಯಗಳು ಸೆರೆಯಾಗಿದೆ.
ರೈಲು ಅಪಘಾತದ ಮೊದಲು ರೈಲ್ವೇ ಸಿಬ್ಬಂದಿ ಕೋಚ್ ನೆಲವನ್ನು ಸ್ವಚ್ಛಗೊಳಿಸುತ್ತಿರುವುದನ್ನು ಮತ್ತು ಮಹಿಳೆ ಕೋಚ್ ನಲ್ಲಿ ಮಲಗಿರುವುದನ್ನ ತೋರಿಸುವುದರಿಂದ ವಿಡಿಯೋ ಆರಂಭವಾಗುತ್ತದೆ. ಕೆಲ ಕ್ಷಣಗಳಲ್ಲೇ ರೈಲು ಹಳಿ ತಪ್ಪಿ ಸಂಪೂರ್ಣ ಅವ್ಯವಸ್ಥೆ ಮತ್ತು ದುರಂತ ಸಂಭವಿಸುವುದು ವಿಡಿಯೋದಲ್ಲಿದೆ. ಈ ವೀಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ