ಇನ್ನುಂದೆ 200 ಕಿ.ಮೀ. ಮತ್ತು ಅದಕ್ಕಿಂತ ಹೆಚ್ಚಿನ ದೂರದ ಮಾರ್ಗಗಳಿಗೆ ಮುಂಗಡ ಬಸ್ ಟಿಕೆಟ್; ತಮಿಳುನಾಡು ಸರ್ಕಾರದ ಆದೇಶ

ತಮಿಳುನಾಡಿನಲ್ಲಿ ಬಸ್ ಪ್ರಯಾಣಿಕರು ಇನ್ಮುಂದೆ 200 ಕಿ.ಮೀ. ಮತ್ತು ಅದಕ್ಕಿಂತ ಹೆಚ್ಚಿನ ದೂರದ ನಿರ್ದಿಷ್ಟ ಮಾರ್ಗಗಳಿಗೆ ಮುಂಗಡ ಬಸ್ ಟಿಕೆಟ್ ಕಾಯ್ದಿರಿಸಬಹುದಾಗಿದೆ. ಬುಧವಾರದಿಂದ ಪ್ರಯಾಣಿಕರು ಆನ್‌ಲೈನ್‌ನಲ್ಲಿ 200 ಕಿಮೀ ಮತ್ತು ಅದಕ್ಕಿಂತ ಹೆಚ್ಚಿನ ನಿರ್ದಿಷ್ಟ ಮಾರ್ಗಗಳಲ್ಲಿ ಸರ್ಕಾರಿ ಬಸ್‌ಗಳಿಗೆ ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದೆ ಎಂದು ಸಾರಿಗೆ ಸಚಿವ ಎಸ್‌ಎಸ್ ಶಿವಶಂಕರ್ ಹೇಳಿದ್ದಾರೆ. ಪ್ರಸ್ತುತ ಸರ್ಕಾರಿ ಬಸ್ ಗಳಲ್ಲಿ
300 ಕಿ.ಮೀ ಮೀರಿದ ಮಾರ್ಗಗಳಲ್ಲಿ ಮಾತ್ರ ಮುಂಗಡ ಬುಕಿಂಗ್ ಲಭ್ಯವಿದೆ.

ಈ ಹೊಸ ಉಪಕ್ರಮವು ಆನ್‌ಲೈನ್ ಬುಕಿಂಗ್‌ಗೆ ಲಭ್ಯವಿರುವ ಟಿಕೆಟ್‌ಗಳ ಸಂಖ್ಯೆಯನ್ನು 51,046 ರಿಂದ 61,464 ಕ್ಕೆ ಹೆಚ್ಚಿಸಲಿದೆ ಎಂದು ಶಿವಶಂಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಧುರೈನಿಂದ ಕೊಡೈಕೆನಾಲ್, ಕೊಲ್ಲಂ, ಮುನ್ನಾರ್, ನಾಗರ್‌ಕೋಯಿಲ್, ಸೇಲಂ ಮತ್ತು ತಿರುವಣ್ಣಾಮಲೈಗೆ ತೆರಳುವ ಬಸ್‌ಗಳಿಗೆ ಕಾಯ್ದಿರಿಸುವಿಕೆ ವ್ಯವಸ್ಥೆಯು ಅನ್ವಯಿಸುತ್ತದೆ.

ಅದೇ ರೀತಿ ಕೊಯಮತ್ತೂರಿನಿಂದ ತಿರುವಣ್ಣಾಮಲೈ, ಸೇಲಂನಿಂದ ಬೆಂಗಳೂರಿಗೆ, ಕಾಂಚೀಪುರಂ, ಮಧುರೈ, ತಿರುವಾರೂರ್, ಈರೋಡ್‌ನಿಂದ ಬೆಂಗಳೂರಿಗೆ, ಕುಮುಳಿ, ಮೈಸೂರು, ಪುದುಚೇರಿ, ರಾಮೇಶ್ವರಂ ಮತ್ತು ತಿರುಚೆಂದೂರಿಗೆ ಬಸ್‌ಗಳು ಸಂಚರಿಸಲಿವೆ.

ಹೊಸೂರಿನಿಂದ ಚೆನ್ನೈ, ಕಡಲೂರು, ಪುದುಚೇರಿ, ಮಧುರೈ ಮತ್ತು ತಿರುಚ್ಚಿಗೆ ಸೇವೆಗಳಿಗೆ ಆನ್‌ಲೈನ್ ಬುಕಿಂಗ್ ಲಭ್ಯವಿರುತ್ತದೆ. ಹೆಚ್ಚುವರಿಯಾಗಿ ಊಟಿಯಿಂದ ಬೆಂಗಳೂರು, ಕಣ್ಣೂರು, ಕೋಯಿಕ್ಕೋಡ್, ಮೈಸೂರು ಮತ್ತು ಪಾಲಕ್ಕಾಡ್, ಹಾಗೆಯೇ ಪಳನಿಯಿಂದ ಕಡಲೂರು, ನೈವೇಲಿ, ರಾಮೇಶ್ವರಂ, ತಿರುಚೆಂದೂರ್, ವಿಲ್ಲುಪುರಂ ಮತ್ತು ಕನ್ನಿಯಾಕುಮಾರಿ ಮಾರ್ಗಗಳಿಗೂ ಸಹ ಬುಕಿಂಗ್ ಸೌಲಭ್ಯ ಸಿಗಲಿದೆ.

ಶಿವಕಾಶಿಯಿಂದ ಈರೋಡ್, ಮೆಟ್ಟುಪಾಳ್ಯಂ, ಸೇಲಂ, ತಿರುಪ್ಪೂರ್ ಮತ್ತು ತಿರುನಲ್ವೇಲಿಯಿಂದ ಕೊಯಮತ್ತೂರ್‌ಗೆ ಸಂಚರಿಸುವ ಬಸ್‌ಗಳ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read