HomeInternationalಟ್ರಕ್- ಪಿಕಪ್ ವ್ಯಾನ್ ನಡುವೆ ಭೀಕರ ಅಪಘಾತ; ಬಾಂಗ್ಲಾದೇಶದಲ್ಲಿ 13 ಮಂದಿ ಸಾವು

ಟ್ರಕ್- ಪಿಕಪ್ ವ್ಯಾನ್ ನಡುವೆ ಭೀಕರ ಅಪಘಾತ; ಬಾಂಗ್ಲಾದೇಶದಲ್ಲಿ 13 ಮಂದಿ ಸಾವು

ಟ್ರಕ್ ಮತ್ತು ಪಿಕಪ್ ವ್ಯಾನ್‌ ನಡುವೆ ಡಿಕ್ಕಿಯಾದ ಪರಿಣಾಮ ಕನಿಷ್ಠ 13 ಮಂದಿ ಸಾವನ್ನಪ್ಪಿದ್ದು 9 ಮಂದಿ ಗಾಯಗೊಂಡಿರುವ ಭೀಕರ ಅಪಘಾತ ಘಟನೆ ಬಾಂಗ್ಲಾದೇಶದ ಸಿಲ್ಹೆಟ್‌ನ ನಜೀರ್ ಬಜಾರ್ ಪ್ರದೇಶದ ಸಿಲ್ಹೆಟ್-ಢಾಕಾ ಹೆದ್ದಾರಿಯಲ್ಲಿ ನಡೆದಿದೆ.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಮೃತರಲ್ಲಿ ಒಂಬತ್ತು ಮಂದಿಯನ್ನು ಹರಿಸ್ ಮಿಯಾ, ಸೌರವ್, ಸಾಧು ಮಿಯಾ, ತಾಯೆಫ್ ನೂರ್, ಸಾಗರ್, ರಶೀದ್ ಮಿಯಾ, ದುಲಾಲ್ ಮಿಯಾ, ಬಾದ್ಶಾ ಮಿಯಾ ಮತ್ತು ವಾಹಿದ್ ಅಲಿ ಎಂದು ಗುರುತಿಸಲಾಗಿದೆ. ನಾಲ್ಕು ಮೃತದೇಹಗಳ ಗುರುತು ಇನ್ನಷ್ಟೇ ಆಗಬೇಕಿದೆ.

ಕುತುಬ್‌ಪುರ ಪ್ರದೇಶದಲ್ಲಿ 20-22 ಕಟ್ಟಡ ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಪಿಕಪ್ ವ್ಯಾನ್‌ಗೆ ಮರಳು ತುಂಬಿದ ಟ್ರಕ್ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತವು ಮುಂಜಾನೆ 5:30 ರ ಸುಮಾರಿಗೆ ಸಂಭವಿಸಿದೆ ಎಂದು ದಕ್ಷಿಣ ಸುರ್ಮಾ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಎಂಡಿ ಸಂಸುದ್ದೋಹಾ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಾಯಾಳುಗಳನ್ನು ಸಿಲ್ಹೆತ್ ಉಸ್ಮಾನಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಪಘಾತದ ನಂತರ ಸಿಲ್ಹೆಟ್-ಢಾಕಾ ಹೆದ್ದಾರಿಯಲ್ಲಿ ಮೂರು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಟ್ರಾಫಿಕ್ ಜಾಮ್ ಉಂಟಾಯಿತು. ಪೊಲೀಸರ ಕಾರ್ಯಾಚರಣೆ ನಂತರ ಸಂಚಾರ ಪುನರಾರಂಭವಾಯಿತು.

For Latest News Updates, Join Our Whatsapp Community🚩
RELATED ARTICLES

Most Popular