
ಜಗತ್ತಿನಲ್ಲಿ ಯಾರೂ ನಾವಂದುಕೊಂಡಂತೆಯೇ ಇರಲು ಸಾಧ್ಯವಿಲ್ಲ ಅಲ್ಲವೇ ? ಸಂಬಂಧಗಳನ್ನು ಬೆಳೆಸುವ ವೇಳೆ ’ನಮ್ಮ ವ್ಯಾಖ್ಯಾನದ ಪರ್ಫೆಕ್ಟ್’ ವ್ಯಕ್ತಿ ಸಿಗುವುದು ಅಸಾಧ್ಯವಾದ ಕಾರಣ ಸಿಕ್ಕವರನ್ನೇ ಒಪ್ಪಿಕೊಂಡು ಅವರನ್ನೇ ಪ್ರೀತಿಸಿಕೊಂಡು ಹೋಗುವುದನ್ನು ದೊಡ್ಡವರು ನಮಗೆ ಹೇಳಿಕೊಟ್ಟಿರುತ್ತಾರೆ ಅಲ್ಲವೇ?
ಆದರೆ ನ್ಯೂಯಾರ್ಕ್ನ ಎರಡು ಮಕ್ಕಳ ತಾಯಿ ರೊಸಾನ್ನಾ ರಾಮೋಸ್ ತಮ್ಮ ’ವ್ಯಾಖ್ಯಾನದ ಪರ್ಫೆಕ್ಟ್’ ಪುರುಷನನ್ನು ಸೃಷ್ಟಿಸಿ ಆತನನ್ನು ಮದುವೆಯಾಗಿದ್ದಾರೆ ! ಹೌದು, ಕೃತಕ ಬುದ್ಧಿಮತ್ತೆ ಆಧರಿತ ಚಿತ್ರ ಬಿಡಿಸುವ ಅಪ್ಲಿಕೇಶನ್ ಬಳಸಿ ಸೃಷ್ಟಿಸಿದ ’ಎರೆನ್ನ ಕರ್ಟಲ್’ ಹೆಸರಿನ ಈ ವ್ಯಕ್ತಿಯ ಚಿತ್ರದೊಂದಿಗೆ ರೊಸಾನ್ನಾ ಲವ್ನಲ್ಲಿ ಬಿದ್ದಿದ್ದಾರೆ.
ತಾವು ಈ ವರ್ಚುವಲ್ ವ್ಯಕ್ತಿಯೊಂದಿಗೆ ಮದುವೆಯಾಗಿರುವುದಾಗಿ ರೊಸನ್ನಾ ಸಾಮಾಜಿಕ ಜಾಲತಾಣದಲ್ಲಿ ಮಾರ್ಚ್ನಲ್ಲಿ ತಮ್ಮ ರಿಲೇಷನ್ಶಿಪ್ ಸ್ಥಾನಮಾನದ ಕುರಿತು ಅಪ್ಡೇಟ್ ಮಾಡಿದ್ದಾರೆ.
