Odisha train tragedy: ‘ಅಪರಾಧಿ ಸರ್ಕಾರವೇ ಅಪರಾಧದ ತನಿಖೆ ಮಾಡುವುದು ಎಂತಹ ವಿಪರ್ಯಾಸ’ : ನಟ ಕಿಶೋರ್

ರಾಜ್ಯ, ದೇಶದಲ್ಲಿ ನಡೆಯುವ ಆಗು ಹೋಗುಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ನಟ ಕಿಶೋರ್ (Actor Kishore) ಇದೀಗ ಒಡಿಶಾ ರೈಲು ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ಶುಕ್ರವಾರ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ (train accident) 280 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ದುರಂತಕ್ಕೆ ಕಾರಣ ಏನು ಎಂದು ಸಿಬಿಐ ತನಿಖೆ ಆರಂಭಿಸಿದೆ. ಘಟನೆ ಕುರಿತು ಕ್ರಮ ಕೈಗೊಳ್ಳುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಈ ವಿಚಾರಕ್ಕೆ ನಟ ಕಿಶೋರ್ (Actor Kishore) ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಯಾರ ಮೇಲೆ ಕಠಿಣ ಕ್ರಮ ? ಯಾರು ಕಾರಣ ? ಎಂದು ಘಟನೆ ಕುರಿತು ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಯಾರ ಮೇಲೆ ಕಠಿಣ ಕ್ರಮ ? ಯಾರು ಕಾರಣ ?? ಇಷ್ಟು ಭೀಕರ ಸಾವು ನೋವು ತಡೆಗಟ್ಟಬಹುದಿತ್ತೇ? ರೈಲ್ವೆ ಮಂತ್ರಿ ಈಗ ಹೋಗಿ ನಿಂತು ಕ್ಯಾಮೆರಾ ಮುಂದೆ ಕಣ್ಣೀರು ಸುರಿಸುವ ನಾಟಕ ಬಿಟ್ಟು ಇಂದಿಗೂ ಖಾಲಿಯಿರುವ 3 ಲಕ್ಷಕ್ಕೂ ಹೆಚ್ಚು ರೈಲ್ವೆ ನೌಕರರನ್ನು 1500ಕ್ಕೂ ಹೆಚ್ಚು ರೈಲ್ವೆ ಸುರಕ್ಷತೆಗೆ ಬೇಕಾದ ಖಾಲಿಯಾಗೇ ಉಳಿದಿರುವ ಹುದ್ದೆಗಳನ್ನು ತುಂಬಿ ಹಳಿ ನಿರ್ವಹಣೆ ಸಮರ್ಪಕವಾಗಿಸಬಹುದಿತ್ತೇ ?ಕೋಟ್ಯಂತರ ರೂಪಾಯಿ ವ್ಯಯಿಸಿ ತಿಂಗಳಿಗೊಂದು ರೈಲಿಗೆ ಹಸಿರು ನಿಶಾನೆ ತೋರಿಸಿ ಫೋಟೋ ಕ್ಲಿಕ್ಕಿಸಿಕೊಳ್ಳುವ ಬದಲು,‘ಕವಚ’ ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ಕೊಟ್ಟು ಎಲ್ಲೆಡೆ ಅಳವಡಿಸಬಹುದಿತ್ತೇ ?ಹಾಗೆ ನೋಡಿದರೆ ಕಳೆದ 6-7 ವರ್ಷಗಳಲ್ಲಿ 1000 ಕ್ಕೂ ಹೆಚ್ಚು ರೈಲು ಗಳು ಹಳಿತಪ್ಪಿ ಅಪಘಾತಕ್ಕೀಡಾಗಿದ್ದರೂ, 2021ರ ಸಿಎಜಿ ರಿಪೋರ್ಟನ್ನು ಕಡೆಗಣಿಸಿ ಸುರಕ್ಷತೆಗಿಂತ ದೇಶದ ಸ್ವತ್ತನ್ನು ಮಾರಿ ದುಡ್ಡು ಮಾಡುವುದರಲ್ಲೇ ನಿರತವಾದ ಸರ್ಕಾರವೇ ಈ ದುರಂತಕ್ಕೆ ಕಾರಣವಲ್ಲವೇ??? ಅಪರಾಧಿ ಸರ್ಕಾರವೇ ಅಪರಾಧದ ತನಿಖೆ ಮಾಡಿ ಅಪರಾಧಿ ಯಾರೆಂದು ಕಂಡು ಹಿಡಿಯುತ್ತದಂತೆ… ಎಂಥ ವಿಪರ್ಯಾಸ!!! ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಹಳಿ ತಪ್ಪಿರುವುದು ರೈಲು ಬೋಗಿಗಳಲ್ಲ.. ನಮ್ಮ ಸರ್ಕಾರ…….

ಮೂರ್ಖ ಸರ್ಕಾರದ, ನಾಲಾಯಕ್ಕು ಮಂತ್ರಿಗಳ, ಪ್ರಜೆಗಳೆಲ್ಲ ಬರೀ ಮತಗಳಂತೆ ಕಾಣುವ ಪ್ರಚಾರಿ ಪ್ರಧಾನಿಯ ಸಂಕುಚಿತ ದೃಷ್ಟಿಯನ್ನು ಮುಚ್ಚಿ ಹಾಕಲು ಹೋಗಿ, ಆಡಳಿತ ಪಕ್ಷ ಮತ್ತದರ ಬೂಟು ನೆಕ್ಕುವ ಮಾಧ್ಯಮಗಳು ಇಮೇಜ್ ಮ್ಯಾನೇಜ್ಮೆಂಟ್ ಮಾಡುತ್ತಾ ತಪ್ಪನ್ನೂ ಸರಿಯೆಂದು ಸಾಧಿಸ ಹೊರಟರೆ ಕಳೆದು ಕೊಂಡ ಪ್ರಾಣಗಳಿಗೆ ನೊಂದು ಜರ್ಜರಿತವಾದ ಕುಟುಂಬಗಳ ಕಣ್ಣೀರಿಗೆ ಅರ್ಥವಿಲ್ಲದೇ ಹೋದೀತು..….ಮಡಿದ ನೂರಾರು ಅಮಾಯಕರ ಜೀವಗಳಿಗೆ ಅಶ್ರುತರ್ಪಣ ….ಇನ್ನಾದರೂ ಸರ್ಕಾರಗಳು ಎಚ್ಚೆತ್ತುಕೊಳ್ಳಲಿ. ಅಪಘಾತಗಳನ್ನೂ ದುರಂತಗಳನ್ನೂ ತಮ್ಮ ಇಮೇಜು ಬೆಳೆಸಿಕೊಳ್ಳಲು ಬಳಸುವುದನ್ನು ಬಿಟ್ಟು ಚುನಾವಣೆಯಾಚೆಗಿನ ತಮ್ಮ ಕರ್ತವ್ಯವನ್ನು ಇನ್ನಾದರೂ ನಿಭಾಯಿಸಲಿ ಎಂದು ನಟ ಕಿಶೋರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read