ಬೆಂಗಳೂರು: ಟೋಲ್ ಸಂಗ್ರಹ ವೇಳೆ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್ ಮಾಡಿಕೊಂಡಿರುವ ಘಟನೆ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೆ ಟೋಲ್ ಬಳಿ ನಡೆದಿದೆ.
ಮಳವಳ್ಳಿ ಶಾಸಕ ಎಂ.ಪಿ. ನರೇಂದ್ರ ಸ್ವಾಮಿ ಜೊತೆ ಟೋಲ್ ಸಿಬ್ಬಂದಿ ಗಲಾಟೆ ಮಾಡಿದ್ದಾರೆ. ಶಾಸಕರು ಬೆಂಗಳೂರಿಗೆ ಆಗುಮಿಸುತ್ತಿದ್ದಾಗ ಜೂನ್ 4ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿಗೆ ಬರುತ್ತಿದ್ದ ಶಾಸಕರ ಕಾರನ್ನು ಟೋಲ್ ಸಿಬ್ಬಂದಿ ತಡೆದು ನಿಲ್ಲಿಸಿದ್ದಾರೆ. ವಾಹನದ ಪಾಸ್ ತೋರಿಸಿದರೂ ಕಾರನ್ನು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಶಾಸಕರ ಜೊತೆ ವಾಗ್ವಾದ ನಡೆಸಿದ್ದಾರೆ.
ಈ ವೇಳೆ ಶಾಸಕರು ಪೊಲೀಸರನ್ನು ಕರೆಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ಯಾವ ಪೊಲೀಸ್ ಬೇಕಾದರೂ ಬರಲಿ, ನಾವು ನೋಡಿರದ ಪೊಲೀಸಾ ಎಂದು ಟೋಲ್ ಸಿಬ್ಬಂದಿ ಆವಾಜ್ ಹಾಕಿದ್ದಾರೆ. ಶಾಸಕರಾದ ನಿಮ್ಮನ್ನು ಎಕ್ಸ್ ಪ್ರೆಸ್ ವೇನಲ್ಲಿ ಬಿಟ್ಟಿಯಾಗಿ ಓಡಾಡಲು ಬಿಡುತ್ತಿದ್ದೇವೆ ಎಂದು ಏಕವನಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಟೋಲ್ ಸಿಬ್ಬಂದಿ ನಡೆಗೆ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.