ಬೇಸಿಗೆಯಲ್ಲಿ ನಿಂಬೆ ಪಾನಕವನ್ನು ಎಲ್ಲರೂ ಇಷ್ಟಪಡುತ್ತಾರೆ. ನಮ್ಮಲ್ಲಿ ಹೆಚ್ಚಿನವರು ತೂಕ ಇಳಿಸಿಕೊಳ್ಳಲು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿನ ಜೊತೆಗೆ ನಿಂಬೆ ರಸ ಬೆರೆಸಿ ಸೇವನೆ ಮಾಡುತ್ತಾರೆ. ಅನೇಕರು ನಿಂಬೆ ಸೋಡಾ ಕುಡಿಯಲು ಇಷ್ಟಪಡುತ್ತಾರೆ.
ನಿಂಬೆ ಪಾನಕ ತೂಕವನ್ನು ಕಡಿಮೆ ಮಾಡುತ್ತದೆಯೇ?
ನಿಯಮಿತವಾಗಿ ನಿಂಬೆ ಪಾನಕವನ್ನು ಕುಡಿಯುವುದರಿಂದ ತೂಕವನ್ನು ಕಡಿಮೆ ಮಾಡಬಹುದು ಅನ್ನೋ ಮಾತಿದೆ. ಮುಂಜಾನೆ ನಿಂಬೆ ರಸ ಬೆರೆಸಿದ ಒಂದು ಲೋಟ ಬಿಸಿ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು ಎಂದು ಆರೋಗ್ಯ ತಜ್ಞರೂ ಹೇಳ್ತಾರೆ. ಉತ್ತಮ ಫಲಿತಾಂಶಕ್ಕಾಗಿ ಅನೇಕ ಜನರು ಈ ಪಾನೀಯಕ್ಕೆ ಜೇನುತುಪ್ಪವನ್ನು ಸೇರಿಸುತ್ತಾರೆ. ಆದರೆ ನಿಂಬೆ ರಸ ನಿಜವಾಗಿಯೂ ತೂಕವನ್ನು ಕಡಿಮೆ ಮಾಡುತ್ತದೆಯೇ?
ನಿಂಬೆ ಪಾನಕ ಕುಡಿಯುವ ಪ್ರಯೋಜನಗಳು
ನಿಂಬೆಯಲ್ಲಿ ಸಿಟ್ರಿಕ್ ಆಮ್ಲ, ಪೊಟ್ಯಾಸಿಯಮ್, ವಿಟಮಿನ್ ಸಿ, ವಿಟಮಿನ್ ಬಿ-6, ಪೆಕ್ಟಿನ್ ಮತ್ತು ಫೈಬರ್ ಹೇರಳವಾಗಿ ಕಂಡುಬರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ಸ್ವತಂತ್ರ ರಾಡಿಕಲ್ಗಳಿಂದ ನಮ್ಮನ್ನು ರಕ್ಷಿಸುತ್ತದೆ. ಎಂಟಿಒಕ್ಸಿಡೆಂಟ್‌ಗಳು ನಿಂಬೆಯಲ್ಲಿ ಕಂಡುಬರುತ್ತವೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಂಬೆ ಪಾನಕ ಕುಡಿಯುವುದರಿಂದ ಹೊಟ್ಟೆ ಮತ್ತು ಸೊಂಟದ ಸುತ್ತ ಹೆಪ್ಪುಗಟ್ಟಿದ ಕೊಬ್ಬು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಅಂದರೆ ನಿಮ್ಮ ತೂಕವು ವೇಗವಾಗಿ ಕಡಿಮೆಯಾಗುತ್ತದೆ.
ಹಸಿವನ್ನು ನಿಯಂತ್ರಿಸುತ್ತದೆ
ನಿಂಬೆಯಲ್ಲಿ ಪೆಕ್ಟಿನ್ ಎಂಬ ವಸ್ತುವಿದ್ದು, ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ಕುಡಿದ ನಂತರ ಎಣ್ಣೆಯುಕ್ತ ಆಹಾರವನ್ನು ತಿನ್ನುವ ಬಯಕೆ ಕಡಿಮೆಯಾಗುತ್ತದೆ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಅದೇ ಸಮಯದಲ್ಲಿ ದೇಹವನ್ನು ನಿರ್ವಿಷಗೊಳಿಸುತ್ತದೆ. ನಿಂಬೆಯಲ್ಲಿರುವ ಪೊಟ್ಯಾಸಿಯಮ್ ದೇಹವನ್ನು ಹೈಡ್ರೀಕರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿಂಬೆ ಪಾನಕವನ್ನು ತಯಾರಿಸುವುದು ಹೇಗೆ?
ಹೊಟ್ಟೆಯ ಬೊಜ್ಜು ಕಡಿಮೆ ಮಾಡಿಕೊಳ್ಳಲು ಬಯಸಿದರೆ ಮೊದಲು ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಎರಡು ಚಮಚದಷ್ಟು ನಿಂಬೆರಸವನ್ನು ಹಾಕಿ. ಬ್ಲಾಕ್ ಸಾಲ್ಟ್ ಮತ್ತು ಜೀರಿಗೆ ಪುಡಿಯನ್ನು ಬೆರೆಸಿ ಕುಡಿಯಿರಿ. ಇದಲ್ಲದೇ ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಜೇನುತುಪ್ಪ ಹಾಗೂ ಒಂದು ಚಮಚ ನಿಂಬೆ ರಸ ಬೆರೆಸಿ ಕೂಡ ಸೇವನೆ ಮಾಡಬಹುದು.