HomeCrimeBIG NEWS: ಪ್ರಿಯತಮೆಯನ್ನೇ ಕೊಲೆಗೈದು ಪರಾರಿಯಾದ ಪ್ರಿಯತಮ

BIG NEWS: ಪ್ರಿಯತಮೆಯನ್ನೇ ಕೊಲೆಗೈದು ಪರಾರಿಯಾದ ಪ್ರಿಯತಮ

ಬೆಂಗಳೂರು: ಪ್ರಿಯಕರನೇ ತಾನು ಪ್ರೀತಿಸಿದ ಯುವತಿಯನ್ನು ಬರ್ಬರವಾಗಿ ಹತ್ಯೆಗೈದು ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ಜೀವನ್ ಭೀಮಾನಗರದಲ್ಲಿ ನಡೆದಿದೆ.

ಅರ್ಪಿತ್ ಪ್ರಿಯತಮೆಯನ್ನೇ ಕೊಂದ ಆರೋಪಿ. ದೆಹಲಿ ಮೂಲದ ಅರ್ಪಿತ್ ಹಾಗೂ ಹೈದರಾಬಾದ್ ಮೂಲದ ಆಕಾಂಕ್ಷಾ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಪರಸ್ಪರ ಪ್ರೀತಿಸುತ್ತಿದ್ದರು. ಜೀವನ್ ಭೀಮಾನಗರದಲ್ಲಿ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದರು. ಇತ್ತೀಚೆಗೆ ಇಬ್ಬರೂ ಕೆಲಸ ಬದಲಾಯಿಸಿ ಬೇರೆ ಬೇರೆ ಕಂಪನಿಗೆ ಸೇರಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತು. ನಿನ್ನೆ ಕೂಡ ಇಬ್ಬರ ನಡುವೆ ಜಗಳವಾಗಿ ಗಲಾಟೆ ವಿಕೋಪಕ್ಕೆ ತಿರುಗಿದೆ. ಅರ್ಪಿತ್, ಆಕಾಂಕ್ಷಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ಬಟ್ಟೆಯಿಂದ ಕಟ್ಟಿ ಪ್ಯಾನ್ ಗೆ ಕಟ್ಟಲು ಯತ್ನಿಸಿದ್ದಾನೆ. ಆದರೆ ಸಾಧ್ಯವಾಗದೇ ಶವವನ್ನು ನೆಲದ ಮೇಲೆ ಮಲಗಿಸಿ ಪರಾರಿಯಾಗಿದ್ದಾನೆ. ಕೆಲಸಕ್ಕೆ ಹೋಗಿದ್ದ ಇನ್ನೋರ್ವ ರೂಮ್ ಮೇಟ್ ಮನೆಗೆ ವಾಪಸ್ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಜೀವನ್ ಭೀಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular